ಕಾರ್ಕಳ:ಭಾಷೆ ಮತ್ತು ಬದುಕಿಗೆ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬರ ಬದುಕಿನಲ್ಲೂ ಭಾಷೆ ಹಾಸುಹೊಕ್ಕಾಗಿದೆ,ಭಾಷೆ ಬಿಟ್ಟು ಬದುಕು ಇಲ್ಲ ಎಂದು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ.ಸುಧಾಕರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಜು.,24 ರಂದು ಕಾರ್ಕಳ ಹೊಟೇಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕದ ವತಿಯಿಂದ ನಡೆದ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ಬಾಷೆ ಭಾಷೆಗಳ ನಡುವೆ ಜಗಳ ಆಗುತ್ತಿದ್ದರೂ ಸಾಹಿತ್ಯಕ್ಕೆ ಭಾಷೆಯ ಹಂಗಿಲ್ಲ ಅದು ಬದುಕಿಗೆ ಅರ್ಥ ಕೊಡಬಲ್ಲದು ಎಂದರು.
ಹಿರಿಯ ಸಾಹಿತಿ ಎ.ಎಸ್ ಎನ್ ಹೆಬ್ಬಾರ್ ದಿಕ್ಸೂಚಿ ಭಾಷಣದಲ್ಲಿ ಕುಂದಾಪ್ರ ಕನ್ನಡವೇ ಅತ್ಯಂತ ಶ್ರೇಷ್ಠ ಹಾಗೂ ಶುದ್ದ ಕನ್ನಡ ಭಾಷೆ, ಚುಟುಕಾದ ಪದ ಬಳಸಿ ಸಂವಹನ ಮಾಡಬಹುದಾದ ಭಾಷೆಯಿದ್ದರೆ ಕುಂದಾಪುರ ಕನ್ನಡ ಎಂದರು. ಇದೇವೇಳೆ ಅವರ ಬದುಕಿನ ಅನುಭವದ ಕಥನಗಳನ್ನು ಬಿಚ್ಚಿಟ್ಟರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ, ನಿತ್ಯಾನಂದ ಪೈ, ರೋಟರಿ ನವೀನ್ ಚಂದ್ರ ಶೆಟ್ಟಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ,ಉದ್ಯಮಿ ರಾಮಕೃಷ್ಣ ಆಚಾರ್ಯ ಉಪಸ್ಥಿತರಿದ್ದರು.
ಕಾರ್ಕಳ ತಾಲೂಕು ಕಸಪಾ ಘಟಕದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.ಉಪನ್ಯಾಸಕ ಪ್ರಕಾಶ್ ನಾಯಕ್, ಶಿಕ್ಷಕಿ ಗೀತಾಚಂದ್ರ ಕಾರ್ಯಕ್ರಮ ನಿರೂಪಿಸಿದರು