ಕಾರ್ಕಳ: ಕರ್ನಾಟಕದ ಅತಿದೊಡ್ಡ ಮಲ್ಟಿ ಟ್ಯಾಲೆಂಟ್ ಟಿವಿ ರಿಯಾಲಿಟಿ ಶೋ “ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್ 2” ರ ಕಾರ್ಕಳ ಸಿಟಿ ಆಡಿಷನ್‌ಗೆ ಜುಲೈ 13 ರಂದು ನಗರದ ಜೇಸೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಸ್ವರಾಜ್ ಮೈದಾನದಲ್ಲಿ ಶಾಸಕ ವಿ ಸುನಿಲ್ ಕುಮಾರ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕಾರ್ಕಳದಲ್ಲಿ ಬಹುಮುಖ ಪ್ರತಿಭೆಗಳು ಇದ್ದು ರಾಷ್ಟ್ರ, ರಾಜ್ಯಮಟ್ಟದಲ್ಲಿ ಹೆಸರು ಗಳಿಸಿದ್ದಾರೆ, ಇದೊಂದು ಪ್ರತಿಭೆ ಅನಾವರಣ ಹಾಗೂ ಸಾಧನೆಗೆ ಉತ್ತಮ ವೇದಿಕೆಯಾಗಿದ್ದು, ಈ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕದ್ರಿ ಈವೆಂಟ್ಸ್, ಮಂಗಳೂರು ಇದರ ಮಾಲೀಕರಾದ ಜಗದೀಶ್ ಕದ್ರಿ ವಹಿಸಿದ್ದರು.
ಈ ಸಂದಬ್ದಲ್ಲಿ ರಮಿತಾ ಶೈಲೇಂದ್ರ, ಅಶ್ವಥ್ ಎಸ್, ಸಂದೀಪ್ ಕಾಮತ್, ಸಾವಿತ್ರಿ ಮನೋಹರ್ ,ಅವಿನಾಶ್ ಜಿ ಶೆಟ್ಟಿ ,ಯೋಗೀಶ್ ಸಾಲಿಯಾನ್ ,ವಾಸುದೇವ ಭಟ್ ನೆಕ್ಕರ ಪಲ್ಕೆ ,ಇಕ್ಬಾಲ್ ಅಹಮದ್, ಮೊಹಮ್ಮದ್ ಅಲಿ, ರಮಕಾಂತ್ ಶೆಟ್ಟಿ , ಸಯ್ಯದ್ ಯುನುಸ್ ಉಪಸ್ಥಿತರಿದ್ದರು.