ಮಣಿಪಾಲ: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ , ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆ ಮತ್ತು ಕಾರ್ಕಳದ ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಗಳಿಗೆ ಆಗಸ್ಟ್ 15, 2025 (ಸ್ವಾತಂತ್ರ್ಯ ದಿನಾಚರಣೆ), ಆಗಸ್ಟ್ 16, 2025 (ತಿಂಗಳ ಮೂರನೇ ಶನಿವಾರ) ಮತ್ತು ಆಗಸ್ಟ್ 17, 2025 (ಭಾನುವಾರ) ರಜೆ ಇರುತ್ತದೆ ಎಂದು ಘೋಷಿಸಿದೆ. ಇದು ಸಂಸ್ಥೆಗಳು ಆಚರಿಸುವ ರಾಷ್ಟ್ರೀಯ ಮತ್ತು ನಿಯಮಿತ ಮಾಸಿಕ ರಜಾದಿನಗಳಿಗೆ ಅನುಗುಣವಾಗಿದೆ.
ಆದಾಗ್ಯೂ, ಅಪಘಾತ ಮತ್ತು ತುರ್ತು ಚಿಕಿತ್ಸಾ ಸೇವೆಗಳು ಎಂದಿನAತೆ 24/7 ಕಾರ್ಯನಿರ್ವಹಿಸುತ್ತವೆ. ತುರ್ತುರಹಿತ ಆಸ್ಪತ್ರೆ ಭೇಟಿಗಳನ್ನು ಅದಕ್ಕೆ ಅನುಗುಣವಾಗಿ ಯೋಜಿಸಲು ಆಡಳಿತ ಮಂಡಳಿಯು ಸಾರ್ವಜನಿಕರನ್ನು ವಿನಂತಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕರ ಪ್ರಕಟಣೆ ತಿಳಿಸಿದೆ. ಮತ್ತು ಎಲ್ಲರಿಗೂ ಸುರಕ್ಷಿತ ಮತ್ತು ಅರ್ಥಪೂರ್ಣ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದೆ.