ಮಂಗಳೂರು :ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ತಾಲೂಕು ಕೊಂಡೆಮೂಲ ಗ್ರಾಮದ ಕಟೀಲು ನಿವಾಸಿ ಬಾಬು ಮುಗೇರ ಎಂಬವರ ಮಗ ತಾರಾನಾಥ (39) ಎಂಬವರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಟೀಲು ನಿವಾಸಿ ದೇವಕಿ ಎಂದು ಗುರುತಿಸಲಾಗಿದೆ. ತಾರಾನಾಥ ತನಗೆ ನಿರಂತರ ಕಿರುಕುಳ ನೀಡುತ್ತಿದ್ದ ಈ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಅಕ್ಟೋಬರ್ 10ರಂದು ಗಿಡಿಗೆರೆ ದರ್ಖಾಸ್ ಎಂಬಲ್ಲಿ ಕುರುಚಲು ಗಿಡದ ಟ್ಯಾಂಕ್ ಬಳಿ ಕುತ್ತಿಗೆಗೆ ವಾಯರ್ ನ್ನು ಸುತ್ತಿ ಕೊಲೆ ಮಾಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಆರೋಪಿ ಪತ್ತೆಗೆ ವಿಶೇಷ ತಂಡ ರಚಿಸಿದ ಬಜಪೆ ಪೋಲಿಸ್ ಠಾಣೆಯ ನಿರೀಕ್ಷಕರಾದ ಸಂದೀಪ್ ಜಿ ಎಸ್ ರವರು ತನಿಖೆ ನಡೆಸಿ ತಾರಾನಾಥ ರವರನ್ನು ಕೊಲೆ ಮಾಡಿರುವ ಆರೋಪಿಯನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರವಾಲ್ ರವರ ಮಾರ್ಗದರ್ಶನದಂತೆ, DCP ಗಳಾದ ಸಿದ್ದಾರ್ಥ ಗೋಯೆಲ್ ಮತ್ತು ದಿನೇಶ್ ಕುಮಾರ್ ರವರ ನಿರ್ದೇಶನದಂತೆ, ಮಂಗಳೂರು ಉತ್ತರ ಉಪ ವಿಭಾಗದ ACP ಶ್ರೀಕಾಂತ K ಮತ್ತು ಪೊಲೀಸ್ ನಿರೀಕ್ಷಕರಾದ ಶ್ರೀ ಸಂದೀಪ್ ಜಿ.ಎಸ್ ರವರ ನೇತೃತ್ವದಲ್ಲಿ PSI ರೇವಣಸಿದ್ದಪ್ಪ, PSI ಕುಮಾರೇಶನ್, PSI ಲತಾ, ಸಿಬ್ಬಂದಿಯವರಾದ ರಶೀದ ಶೇಖ್, ಸುಜನ್, ಶ್ರೀಮತಿ ಪುಷ್ಪವತಿ, ಬಸವರಾಜ್ ಪಾಟೀಲ್, ಚಿದಾನಂದ, ಭರಮಾ ಬಡಿಗೇರ್, ದುರ್ಗಾ ಪ್ರಸಾದ್, ಪ್ರೇಮ್ ಕುಮಾರ್, ವಿರುಪಾಕ್ಷ ಚಂದ್ರಕಾಂತ್, ಮದು ಮತ್ತು ವಿದ್ಯಾ ಇವರುಗಳು ಈ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.