ಕಾರ್ಕಳ: ರೋಟರಿ ಕ್ಲಬ್ ನಿಟ್ಟೆ, ರೋಟರಿ ಸಮುದಾಯ ದಳ ಕೆಮ್ಮಣ್ಣು ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್, ಕೆಮ್ಮಣ್ಣು ಇವರ ಸಂಯುಕ್ತ ಆಶ್ರಯದಲ್ಲಿ, ರೋಟರಿ ಜಿಲ್ಲಾ ಯೋಜನೆಯಾದ “ಕೆರೆಗಳ ಸಂರಕ್ಷಣೆ” ಕಾರ್ಯಕ್ರಮದಡಿ “ಕೆರೆಜಲ ಜಾಗೃತಿ ಮತ್ತು ಶುದ್ಧತಾ ಅಭಿಯಾನ” ಸೆ. 21 ರಂದು ಗಂಟೆಗೆ ಕೆಮ್ಮಣ್ಣು ಶ್ರೀ ಕ್ಷೇತ್ರ ಕೆಮ್ಮಣ್ಣು ದೇವಳದ ಕೆರೆಯಲ್ಲಿ ಜರುಗಿತು.
ಈ ಅಭಿಯಾನಕ್ಕೆ ರೋಟರಿ ಕ್ಲಬ್ ನಿಟ್ಟೆಯ ಹಿರಿಯ ಸದಸ್ಯರಾದ ರೊ. ಯೋಗೀಶ್ ಹೆಗ್ಡೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನಿಟ್ಟೆಯ ಅಧ್ಯಕ್ಷರಾದ ರೊ. ಡಾ. ರಘುನಂದನ್ ಕೆ.ಆರ್., ಗ್ರಾಮ ಪಂಚಾಯತ್ ಸದಸ್ಯರಾದ ಸಂತೋಷ ಶೆಟ್ಟಿ, ರೋಟರಿ ಸಮುದಾಯ ದಳದ ಅಧ್ಯಕ್ಷರಾದ ಗಣೇಶ್ ಕೆಮ್ಮಣ್ಣು ಹಾಗೂ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ರೊ. ಡಾ. ಪ್ರಶಾಂತ್ ಉಪಸ್ಥಿತರಿದ್ದರು.
ಅಭಿಯಾನದ ಅಂಗವಾಗಿ ಸುಮಾರು 47 ಜನ ಸೇವಕರ್ತರು ಭಾಗವಹಿಸಿ ಕೆರೆ ಶುದ್ಧೀಕರಣ ಹಾಗೂ ಜಾಗೃತಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಈ ಅಭಿಯಾನವು ಕೆರೆಗಳ ಸಂರಕ್ಷಣೆ, ಪರಿಸರ ಶುದ್ಧತೆ ಮತ್ತು ಸಾರ್ವಜನಿಕ ಜಾಗೃತಿಯ ಕಡೆಗೆ ಮಹತ್ವದ ಹೆಜ್ಜೆಯಾಯಿತು.