Share this news

ಕಾರ್ಕಳ,ಸೆ.25: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮಿಯ್ಯಾರು ವಲಯದ ವತಿಯಿಂದ ಸೆ . 24 ರಂದು ಗುರುವಾರ ಡಿಜಿ ಪೇ ಮೂಲಕ ನಗದು ಪಡೆಯುವ ಕಾರ್ಯಕ್ರಮಕ್ಕೆ ಕೆರ್ವಾಶೆಯಲ್ಲಿ‌ ಚಾಲನೆ ನೀಡಲಾಯಿತು.
ಕೆರ್ವಾಶೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾರವರು ಡಿಜಿಪೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಡಿಜಿ ಪೇ ಮೂಲಕ ನಗದನ್ನು ಪಡೆಯುವ ಕಾರ್ಯಕ್ರಮವು ನಮ್ಮ ಹಳ್ಳಿಗಳಿಗೆ ಎಟಿಎಂ ವ್ಯವಸ್ಥೆ ಇಲ್ಲದೆ ಇಲ್ಲದಿರುವುದರಿಂದ ಗ್ರಾಮಸ್ಥರಿಗೆ ಬಹಳ ಅನುಕೂಲವಾಗಿದೆ ಎಂದರು.
ಮಿಯ್ಯಾರು ವಲಯ ಜನಜಾಗೃತಿ ವೇದಿಕೆಯ ವಲಯಾದ್ಯಕ್ಷ ಜಯರಾಮ್ ಬಂಗೇರ ಮಾತನಾಡಿ ಯೋಚನೆಯಿಂದ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಇಂತಹ ಡಿಜಿ ಪೇ ಕಾರ್ಯಕ್ರಮಗಳು ಹಳ್ಳಿಗಳಲ್ಲಿ ಅನುಷ್ಠಾನಗೊಳಿಸಿದ ಬಗ್ಗೆ ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಡಿಜಿ ಪೇ ಮೂಲಕ ಸಾಧನ ಸ್ವಸಹಾಯ ಸಂಘದ ಮರಿಯಾಂಬಿ ಯವರು MATM ಮೂಲಕ ನಗದು ಮೊತ್ತವನ್ನು ಪಡೆದುಕೊಂಡರು ಮತ್ತು ಸುದರ್ಶನ್ ರವರು AEPS ಮೂಲಕ ನಗದು ಮೊತ್ತವನ್ನು ಪಡೆದುಕೊಂಡು ಎರಡು ಜನರು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಶ ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಾರ್ಕಳ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಮಾತನಾಡಿ ಯೋಜನೆಯ ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು ನಂತರ ಡಿಜಿ ಪೇ ಕಾರ್ಯಕ್ರಮ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿ ಇದರ ಪ್ರಯೋಜನಗಳನ್ನು ಸಂಘದ ಸದಸ್ಯರುಗಳಲ್ಲದೇ ಇತರ ಗ್ರಾಮಸ್ಥರು ಸಹ ಈ ಸೌಲಭ್ಯ ಪಡೆಯುವಂತೆ ಮಾಹಿತಿ ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ವಲಯಾಧ್ಯಕ್ಷ ಅಶ್ವಥ್ ನಾರಾಯಣ್,ಜನಜಾಗೃತಿ ವೇದಿಕೆಯ ಸದಸ್ಯ ಶಶಿಧರ್ ಕುಲಾಲ್.ಲ, ಶೌರ್ಯ ಘಟಕದ ಮಾಸ್ಟರ್ ಆದ ಸದಾನಂದ ಸಾಲಿಯಾನ್, ಒಕ್ಕೂಟದ ಅಧ್ಯಕ್ಷರುಗಳಾದ ಪ್ರಭಾಕರ್ ನಾಯ್ಕ್ ಮತ್ತು ಪ್ರಭಾಕರ್ ಗುಡಿಗಾರ್, ಅರ್ಚಕ ಶಂಕರ್ ನಾರಾಯಣ್ ಭಟ್. ಶ್ರೀಧರ್ ಸಹಾಯಕರಾದ ಸದಾಶಿವ್ ಪೂಜಾರಿ. ಸೇವಾ ಪ್ರತಿನಿಧಿ ಮಂಜುಳ. ಮತ್ತು CSC ಸೇವಾದಾರರಾದ ಕುಮಾರಿ ಅಕ್ಷಿತಾ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.
ವಲಯದ ಮೇಲ್ವಿಚಾರಕ ದಿನೇಶ್ ಹೆಗ್ಡೆ ಸ್ವಾಗತಿಸಿ ವಂದಿಸಿದರು.
ತಾಲೂಕು ನೋಡಲ್ ಅಧಿಕಾರಿ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *