Share this news

ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ಬೆಲೆ ಏರಿಕೆ ಬಿಸಿತಟ್ಟಿದೆ. ಇತ್ತೀಚೆಗೆ ಪೆಟ್ರೋಲ್, ಡಿಸೇಲ್ ಮೇಲಿನ ಸೆಸ್ ದರವನ್ನು ಹೆಚ್ಚಿದ ರಾಜ್ಯ ಸರ್ಕಾರ ಈಗ ಮತ್ತೆ ಹಾಲಿನ ದರವನ್ನು ಹೆಚ್ಚಿಸಿ ಆದೇಶವನ್ನು ಹೊರಡಿಸಿದೆ.

ಲೀಟರ್ ಹಾಲಿಗೆ 2.10 ರೂ ಬೆಲೆ ಹೆಚ್ಚಳ ಮಾಡಿ ಆದೇಶಿಸಿದ್ದು, ಈ ಮೂಲಕ ಗ್ರಾಹಕರಿಗೆ ಮತ್ತೆ ಬರೆ ಬಿದ್ದಿದೆ. ಹಾಲಿನ ದರದ ಜೊತೆ ಪ್ರತೀ ಪ್ಯಾಕೆಟ್‌ನಲ್ಲಿ 50ml ಹಾಲು ಕೂಡ ಹೆಚ್ಚಳ ಮಾಡಲಿದೆ. ಹೀಗಾಗಿ ಇನ್ನು ಮುಂದೆ ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲಿ 50 ml ಹೆಚ್ಚು ಇರಲಿದ್ದು, ಒಟ್ಟು 550 ml ಹಾಲು ಸಿಗಲಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಸುದ್ದಿಗೋಷ್ಠಿ ನಡೆಸಿ, 98 ಲಕ್ಷ 17ಸಾವಿರ ಲೀ ಹಾಲು ಸಂಗ್ರಹ ಆಗುತ್ತಿದೆ. ಸದ್ಯದಲ್ಲೇ ಒಂದು ಕೋಟಿ ಸಂಗ್ರಹ ಗುರಿ ಮುಟ್ಟಲಿದೆ. ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣ. ಸದ್ಯದ ಶೇಖರಣೆಯಲ್ಲಿ 30 ಲಕ್ಷ ಪೌಡರ್ ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗುತ್ತಿದೆ. 27 ಲಕ್ಷ ಹಾಲು ಉತ್ಪಾದಕರು ಗ್ರಾಹಕರಿಗೆ ತೊಂದರೆಯಾಗಬಾರದು. ಇಬ್ಬರು ಕೂಡ ನಮಗೆ ಎರಡು ಕಣ್ಣಿದ್ದ ಹಾಗೆ. ಲೀ ಗೆ ಸದ್ಯ ಗ್ರಾಹಕರಿಗೆ 42 ರೂ ಇದೆ ಎಂದಿದ್ದಾರೆ.

ಸಾವಿರ ಎಂಎಲ್ ಬರುತ್ತಿದ್ದ ಹಾಲು ಇನ್ನುಮುಂದೆ ಸಾವಿರದ ಐವತ್ತು ಎಂಎಲ್ ಗೆ ಏರಿಕೆಯಾಗಲಿದೆ. ಹಾಲು ಹೆಚ್ಚಳ ಮಾಡಿದ್ದಕ್ಕೆ 2ರೂ ದರ ಏರಿಕೆ ಮಾಡಿದ್ದೇವೆ ಎಂದು ಕೆಎಂಎಫ್ ಅಧ್ಯಕ್ಷರು ತಿಳಿಸಿದ್ದಾರೆ. ಹಾಲಿನ ದರ ಮಾತ್ರ ಹೆಚ್ಚಳ ಮಾಡಲಾಗಿದೆ. ಮೊಸರಿಗೆ ಈ ಹಿಂದಿನ ದರವೇ ಅನ್ವಯವಾಗಲಿದೆ.

15% ಹಾಲು ಸಂಗ್ರಹ ಹೆಚ್ಚಳ ಆಗಿದೆ. ಇದನ್ನ ಮಾರಾಟ ಮಾಡುವ ದೃಷ್ಟಿಯಿಂದ ಪ್ರತಿ ಪ್ಯಾಕೇಟ್ ಗೆ 50 ಎಂಎಲ್ ಹೆಚ್ಚುವರಿ ಹಾಲನ್ನ ಪ್ಯಾಕೇಟ್ ನಲ್ಲಿ ನೀಡಲಿದ್ದೇವೆ. ಹಾಗಾಗಿ ಹೆಚ್ಚುವರಿ ಹಾಲು ನೀಡಿ 2 ರೂ ಹೆಚ್ಚಳ ಮಾಡುತ್ತಿದ್ದೇವೆ. ಇದು ದರ ಏರಿಕೆ ಅಲ್ಲ. ಪ್ರತಿ ಪ್ಯಾಕೆಟ್ ಗೆ ಹೆಚ್ಚುವರಿ ಹಾಲು ಸೇರಿಸಿ ದರ ಏರಿಕೆ ಮಾಡಿದ್ದೇವೆ ಎಂದು ಕೆಎಂಎಫ್ ಸಮರ್ಥನೆ ಮಾಡಿಕೊಂಡಿದೆ.

 

 

                        

                          

 

 

 

 

 

                        

                          

 

 

Leave a Reply

Your email address will not be published. Required fields are marked *