Share this news

ಕಾರ್ಕಳ: ಕಾರ್ಕಳ ತಾಲೂಕಿನ ಕುಕ್ಕುಂದೂರಿನಲ್ಲಿ ದನ ಅಡ್ಡ ಬಂದ ಪರಿಣಾಮ ರಿಕ್ಷಾ ಕಲ್ಲಿನ ಗುಡ್ಡೆಗೆ ಡಿಕ್ಕಿಯಾಗಿ ಚಾಲಕ ಮತ್ತು ಸವಾರ ಇಬ್ಬರೂ ಗಾಯಗೊಂಡಿದ್ದಾರೆ.

ನಿಟ್ಟೆಯ ಪ್ರಶಾಂತ್‌ ಎಂಬವರು ಆಟೋರಿಕ್ಷಾದಲ್ಲಿ ಅ.19 ರಂದು ನಕ್ರೆ ಕಡೆಯಿಂದ ರಂಗನಪಲ್ಕೆ ಕಡೆಗೆ ಹೋಗುತ್ತಿದ್ದಾಗ ಕುಕ್ಕುಂದೂರು ಗ್ರಾಮದ ಗುಂಡ್ಯಡ್ಕ ಸೇತುವೆ ಬಳಿ ದನವೊಂದು ಅಡ್ಡ ಬಂದ ಕಾರಣ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ಕಲ್ಲಿನ ಗುಡ್ಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಶಾಂತ್‌ ಮತ್ತು ರಿಕ್ಷಾ ಚಾಲಕ ಆನಂದ ಇಬ್ಬರೂ ಗಾಯಗೊಂಡಿದ್ದಾರೆ.

ಪ್ರಶಾಂತ್‌ ರಿಗೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಷಿನ ಚಿಕಿತ್ಸೆಗಾಗಿ ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಸಲಾಗಿದೆ.ರಿಕ್ಷಾ ಚಾಲಕ ಆನಂದ ಅವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. .

 

 

Leave a Reply

Your email address will not be published. Required fields are marked *