
ಕಾರ್ಕಳ: ತಾಲೂಕಿನ ಕುಕ್ಕುಂದೂರು ಗ್ರಾಮದ ಪೊಸನೊಟ್ಟು ಎಂಬಲ್ಲಿ ಯುವಕನಿಗೆ ಕಳ್ಳತನದ ಆರೋಪ ಮಾಡಿ ನಾಲ್ಕು ಜನರ ತಂಡ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಯುವಕ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನ.23 ರಂದು ಮುಂಜಾನೆ ಕುಕ್ಕುಂದೂರು ಪೊಸನೊಟ್ಟುವಿನ ಸುರೇಶ್ (28ವ) ಎಂಬವರ ಮನೆ ಬಳಿ ಬಂದ ಆರೋಪಿಗಳಾದ ಶಿವರಾಜ್, ಶಶಿಕಿರಣ, ಹೇಮಂತ್ ಹಾಗೂ ವಿಜೇಶ್ ಎಂಬವರು ಸುರೇಶ ರನ್ನು ಮನೆಯಿಂದ ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು ನೀನು ಕಳ್ಳತನ ಮಾಡುತ್ತೀಯಾ ಎಂದು ಹೇಳಿ ಆರೋಪಿ ಶಿವರಾಜ್ ಮರದ ರೀಪಿನಿಂದ ಹಲ್ಲೆ ನಡೆಸಿದ್ದಾನೆ. ಅಲ್ಲದೇ ಉಳಿದ ಆರೋಪಿಗಳು ಅವರನ್ನು ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದಾರೆ.
ಹಲ್ಲೆಗೊಳಗಾದ ಯುವಕ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
