
ಕಾರ್ಕಳ: ಕಾರ್ಕಳ ತಾಲೂಕು ಎರ್ಲಪಾಡಿ ಗ್ರಾಮದ ಕುಂಟಲಪಾಡಿ ಎಂಬಲ್ಲಿ ಅಕ್ರಮ ಕಲ್ಲು ಗಣಿಗಾರಿಕೆಗೆ ದಾಳಿ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಅ.23 ರಂದು ಕುಂಟಲ್ಪಾಡಿಯ ಸರಕಾರಿ ಜಾಗದ ಸ.ನಂ 243/1 ರಲ್ಲಿ ನಡೆಯುತ್ತಿದ್ದ ಗಣಿಗಾರಿಕೆಗೆ ದಾಳಿ ನಡೆಸಿದ್ದಾರೆ.
ಈ ವೇಳೆ ಭೋಜ ಶೆಟ್ಟಿ ಎಂಬವರು ಸುಮಾರು 3,500/- ರೂ. ಮೌಲ್ಯದ 300 ಸೈಜು ಶಿಲೆ ಕಲ್ಲುಗಳನ್ನು ಮಾರಾಟಕ್ಕಾಗಿ ಸಂಗ್ರಹ ಮಾಡಿದ್ದು, ಸುಮಾರು 150 ಸೈಜು ಕಲ್ಲುಗಳನ್ನು ಸಾಗಾಟಕ್ಕಾಗಿ ಲಾರಿಯಲ್ಲಿ ಲೋಡು ಮಾಡಿದ್ದರು. ಪೊಲೀಸರು ಸೈಜು ಕಲ್ಲು, ಲಾರಿ,ಕಬ್ಬಿಣದ ಸುತ್ತೆ, ಕಬ್ಬಿಣದ ಚಮ್ಮಡಿ ವಶಪಡಿಸಿಕೊಂಡು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.






