ಕಾರ್ಕಳ: ತಮಿಳುನಾಡು ಮೂಲದ ಕಲ್ಲು ಕೋರೆ ಕಾರ್ಮಿಕನೋರ್ವ ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಸರ್ಕಾರಿ ಜಮೀನಿನಲ್ಲಿ ಮಲಗಿದ್ದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ತಮಿಳುನಾಡಿನ ತಿರುಪುರ ಜಿಲ್ಲೆಯ ಮಣಿಕಂಠ(41) ಎಂಬಾತ ಮೃತಪಟ್ಟ ಕಾರ್ಮಿಕ. ಈತ ಕಳೆದ 10 ವರ್ಷದ ಹಿಂದೆ ತನ್ನ ಪತ್ನಿ ಸುಮತಿ ಎಂಬವರತ ಜತೆ ಕಾರ್ಕಳಕ್ಕೆ ಬಂದು ನೆಲೆಸಿದ್ದು, ಕಲ್ಲು ಕೋರೆಯಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಮಣಿಕಂಠ ಕಳೆದ 20 ವರ್ಷಗಳಿಂದ ವಿಪರೀತ ಕುಡಿತದ ಚಟ ಹೊಂದಿದ್ದ ಹಾಗೂ ಅಪಸ್ಮಾರ ಕಾಯಿಲೆಯಿಂದ ಬಳಲುತ್ತಿದ್ದುಮ ಈ ಕುರಿತು ಹಾಸನದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಂದು ಆತನ ಪತ್ನಿ ಸುಮತಿ ಹೇಳಿದ್ದಾಳೆ. ಆತ ಹಾಸನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಸರಿಯಾಗಿ ಔಷಧಿ ತೆಗೆದುಕೊಳ್ಳದ ಹಿನ್ನಲೆಯಲ್ಲಿ ಕಾಯಿಲೆ ಉಲ್ಬಣಗೊಂಡಿದೆ,ಆತ ಕಳೆದ 15 ದಿನಗಳಿಂದ ಮಣಿಕಂಠ ಎಂಬಾತನ ಕಲ್ಲಿನ ಕೋರೆಯಲ್ಲಿ ಕೆಲಸಕ್ಕೆ ಸೇರಿಕೊಂಡವನು ಬಳಿಕ ಆ.12ರಂದು ಕೆಲಸಕ್ಕೆ ಹೋಗದೇ ರಜೆ ಮಾಡಿದ ಆತ ಅದೇ ದಿನ ಸಂಜೆ 5 ಗಂಟೆಗೆ ಮಂಜರಾಯಿ ಬಳಿಯ ಸರ್ಕಾರಿ ಜಾಗದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಈ ಕುರಿಕತು ಕಾರ್ಕಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ















`
