ಕಾರ್ಕಳ: ಎಳ್ಳಾರೆ ಗ್ರಾಮದ ಮುಳ್ಕಾಡು ಸ. ಕಿ.ಪ್ರಾ.ಶಾಲೆಯಲ್ಲಿ ಇಂದು ಅಜೆಕಾರು ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಂದ ಶಾಲಾ ಮಕ್ಕಳಿಗೆ ಕಾನೂನು ಮಾಹಿತಿ ಕಾರ್ಯಕ್ರಮ ನಡೆಯಿತು.
ಠಾಣಾಧಿಕಾರಿ ಮಹೇಶ್ ಮಾತನಾಡಿ, ವ್ಯಾಸಂಗದ ವಿವಿಧ ಹಂತಗಳಲ್ಲಿ ಸಮಸ್ಯೆಯಾದರೆ ಕೈಗೊಳ್ಳಬಹುದಾದ ಕ್ರಮಗಳು,ಮಕ್ಕಳಿಗಿರುವ ಹಕ್ಕುಗಳು,ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿ ಶಾಲಾ ಪರಿಸರದ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದರು. ಸಂಜೀವ ಪೂಜಾರಿ ಉಪಸ್ಥಿತರಿದ್ದರು.
SDMC ಅಧ್ಯಕ್ಷರಾದ ಸತೀಶ್ ಪೂಜಾರಿ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಜನಾರ್ಧನ ಬೆಳಿರಾಯ ವಂದಿಸಿದರು. ಸುಭಾಸ್ ನಿರೂಪಿಸಿದರು. ಶಿಕ್ಷಕಿಯರಾದ ಶ್ವೇತಾ, ಪ್ರಫುಲ್ಲ,ನಿಶಾ,ರೂಪ ಸಹಕರಿಸಿದರು.