Share this news

ಬೆಂಗಳೂರು, ಅ.12 : ರಾಜ್ಯದಲ್ಲಿ ಆರೆಸೆಸ್ಸ್ ಚಟುವಟಿಕೆಗಳಿಗೆ ನಿರ್ಬಂಧ ವಿಚಾರಕ್ಕೆ ಸಂಬAಧಸಿದAತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟದಿAದ ತಕ್ಷಣವೇ ವಜಾಗೊಳಿಸುವಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದೇಶ ಸೇವೆಗೆ ತಮ್ಮನ್ನು ಸಮರ್ಪಿಸುವ ಆರೆಸೆಸ್ಸ್ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಪ್ರಿಯಾಂಕ್ ಖರ್ಗೆ ವರ್ತನೆ ಖಂಡನೀಯ,ಆರೆಸೆಸ್ಸ್ ಸ್ಥಾಪನೆಯಾಗಿ 100 ತುಂಬಿದ್ದು ಈ ಸಂದರ್ಭದಲ್ಲಿ ಆರೆಸೆಸ್ಸ್ ಪಥಸಂಚಲನ ನಡೆಸಿ ದೇಶಭಕ್ತಿ ಜಾಗೃತಗೊಳಿಸುತ್ತಿದೆ. ಸಂಘ ವಂಶಪಾರAಪರ್ಯ ಇಲ್ಲ, ಅದರಲ್ಲಿ ಸ್ವಾರ್ಥ ಇಲ್ಲ. ಇದನ್ನು ತಿಳಿದುಕೊಳ್ಳದ ಪ್ರಿಯಾಂಕ್ ಸಿಎಂಗೆ ಪತ್ರ ಬರೆದಿದ್ದಾರೆ. ಅವರಿಗೆ ಅರಿವಿನ ಕೊರತೆಯಿದ್ದು, ಪ್ರಿಯಾಂಕ್ ಖರ್ಗೆ ಆರ್ಟಿಕಲ್ 19ನ್ನು ಉಲ್ಲಂಘನೆ ಮಾಡಿದ್ದಾರೆ. ಆರ್ಟಿಕಲ್ 19 ಪ್ರಕಾರ ಮುಕ್ತವಾಗಿ ಸಭೆ ಸೇರಬಹುದು, ಮಾತಾಡಬಹುದು. ಹಾಗಾಗಿ ಪ್ರಿಯಾಂಕ್ ಅವರನ್ನು ತಕಣವೇ ಸಂಪುಟದಿAದ ವಜಾ ಮಾಡಬೇಕು. ಸಂವಿಧಾನ ಆಶಾಯಕ್ಕೆ ವಿರುದ್ಧವಾಗಿ ನಕಾರಾತ್ಮಕ ಆಲೋಚನೆ ತುಂಬುತ್ತಾರೆ. ನಕಾರಾತ್ಮಕ ಆಲೋಚನೆ ತುಂಬುತ್ತಾರೆ ಅಂತ ಪ್ರಿಯಾಂಕ್ ಉಲ್ಲೆಖಿಸಿದ್ದಾರೆ. ಯಾವ ನಕಾರಾತ್ಮಕ ವಿಚಾರ ಅಂತ ಹೇಳಿ ಇಲ್ಲವೇ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *