ನವದೆಹಲಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರರಿಗೆ ಪ್ರತೀ ತಿಂಗಳು 8500 ರೂಪಾಯಿ ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಕೂಟದ ನಾಯಕರು ತಮ್ಮ ಪ್ರಚಾರ ಭಾಷಣದಲ್ಲಿ ನೀಡಿದ್ದ ಹೇಳಿಕೆಗಳು ಹಲವೆಡೆ ಕಾಂಗ್ರೆಸ್ ಗೆ ಭಾರೀ ಲಾಭವಾಗಿತ್ತು, ಇದಲ್ಲದೇ ಇದೇ ಗ್ಯಾರಂಟಿ ಭರವಸೆಯು ಹಲವೆಡೆ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು ಎಂದು ವಿಶ್ಲೇಷಿಸಲಾಗಿತ್ತು.
ಆದರೆ ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಕಾಂಗ್ರೆಸ್ ಪಕ್ಷದ ಖಟಾಕಟ್ ಹೇಳಿಕೆ ಇಂಡಿಯಾ ಕೂಟವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ರಾಹುಲ್ ಗಾಂಧಿಯ ಖಟಾಕಟ್ ಘೋಷಣೆ ವಿರುದ್ಧ ದೆಹಲಿ ಮೂಲದ ಸುಪ್ರೀಂ ಕೋರ್ಟ್ ವಕೀಲ ವಿಭೋರ್ ಆನಂದ್ ಅವರು ಗಾಂಧಿ ಕುಟುಂಬ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಲಂಚದ ಆರೋಪ ಹೊರಿಸಿದ್ದು, ಇಂಡಿಯಾ ಕೂಟದ ಸಂಸದರ ಪ್ರಮಾಣ ವಚನಕ್ಕೆ ತಡೆ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರಪತಿಯವರು ಜೂನ್ಮರ್ಮು 24ರಂದು ನೂತನವಾಗಿ ಚುನಾಯಿತರಾದ ಸಂಸದರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ರಾಷ್ಟ್ರಪತಿ ಮುರ್ಮು ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್‌ನ 99 ಸಂಸದರು ಮತ್ತು ಸಮಾಜವಾದಿ ಪಕ್ಷದ 37 ಸಂಸದರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ತಡೆಹಿಡಿಯಬೇಕು ಎಂದು ಪತ್ರಬರೆದಿದ್ದಾರೆ. ಈಗಾಗಲೇ ಅವರ ಅನರ್ಹತೆಯ ಮನವಿಯು ರಾಷ್ಟ್ರಪತಿ ಬಳಿ ಬಾಕಿ ಉಳಿದಿದೆ. ಜೂನ್ 4ರಂದು ಚುನಾವಣಾ ಫಲಿತಾಂಶ ಪ್ರಕಟವಾದ ವಾರದಲ್ಲಿ ಆನಂದ್ ಅವರು ಕಾಂಗ್ರೆಸ್ ಮತ್ತು ಎಸ್‌ಪಿಯ ಎಲ್ಲಾ 136 ಸಂಸದರನ್ನು ಅನರ್ಹಗೊಳಿಸುವಂತೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಕಾಂಗ್ರೆಸ್ ಪಕ್ಷ ವೋಟ್ ಹಗರಣಕ್ಕೆ ಹಣದ ಭರವಸೆಯಲ್ಲಿ ತೊಡಗಿದೆ ಎಂದು ಆನಂದ್ ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ “ಖಟಾಕಟ್ ನಗದು ವರ್ಗಾವಣೆ” ಘೋಷಣೆಯಿಂದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಗಳ ಹೊರಗೆ ಹಾಗೂ ಅಂಚೆ ಕಚೇರಿಗಳಲ್ಲಿ ಮಹಿಳೆಯರು 8500 ಯೋಜನೆಯ ಲಾಭ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು. ಇದು ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
ವಕೀಲ ವಿಭೋರ್ ಆನಂದ್ ಪ್ರಕಾರ, ಕಾಂಗ್ರೆಸ್‌ನ ಖಟಾಕಟ್ ಯೋಜನೆ ಮತ್ತು ಗ್ಯಾರಂಟಿ ಕಾರ್ಡ್‌ಗಳ ವಿತರಣೆಯು ಮತದಾರರಿಗೆ ಲಂಚದ ಆಮಿಷ ನೀಡಿದಂತೆ ಎಂದು ಆರೋಪಿಸಿ ಇತ್ತೀಚೆಗಷ್ಟೇ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪ್ರಾತಿನಿಧ್ಯ ಕಾಯಿದೆ, 1951ರ ಸೆಕ್ಷನ್ 123(1)ರ ಅಡಿಯಲ್ಲಿ ಕಾಂಗ್ರೆಸ್ ಅಪರಾಧ ಮಾಡಿದೆ. ಇದು ಮತದಾರರಿಗೆ ಲಂಚ ನೀಡುವ ಏಕೈಕ ಉದ್ದೇಶದಿಂದ ಸಂಪೂರ್ಣ ಭ್ರಷ್ಟ ಆಚರಣೆಗಳಿಗೆ ಸಮಾನವಾಗಿದೆ ಎಂದು ಆನಂದ್ ರಾಷ್ಟ್ರಪತಿ ಮುರ್ಮು ಅವರಿಗೆ ಪತ್ರದಲ್ಲಿ ತಿಳಿಸಿದ್ದಾರೆ.ಸಧ್ಯ ರಾಷ್ಟ್ರಪತಿಗಳು ಈ ಪತ್ರವನ್ನು ಕಾನೂನು ತಜ್ಞರ ಅಭಿಪ್ರಾಯಕ್ಕೆ ಕಳುಹಿಸಿದ್ದಾರೆ.ಒಂದುವೇಳೆ ಇದು ಕಾನೂನಿಗೆ ವಿರುದ್ಧವಾಗಿದ್ದರೆ ಇಂಡಿಯಾ ಮೈತ್ರಿಕೂಟದ ಸಂಸದರಿಗೆ ಖಟಾಖಟ್ ಹೇಳಿಕೆ ಮುಳುವಾಗುವುದರಲ್ಲಿ ಅನುಮಾನವಿಲ್ಲ.