Share this news

ಕಾರ್ಕಳ: ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವ್ಯಕ್ತಿಯೊಬ್ಬರಿಗೆ ಜೀವಬೆದರಿಕೆ ಹಾಕಿದ ಪ್ರಕರಣ ನಡೆದಿದೆ.

ಬೋಳ ಗ್ರಾಮದ ನಿವಾಸಿ ರೊನಾಲ್ಡ್ ಅಲ್ಫೋನ್ಸ್ (51) ಎಂಬವರು ಶುಕ್ರವಾರ ಬೆಳಗ್ಗೆ 11:30 ರ ಸುಮಾರಿಗೆ ತಮ್ಮ ಬೈಕಿನಲ್ಲಿ ಬೋಳ ಬೋಪಾಡಿ 5 ಸೆಂಟ್ಸ್ ಬಳಿಯ ಹೋಗುತ್ತಿದ್ದ ವೇಳೆ ಪಂಚಾಯತ್ ಸದಸ್ಯ ಬೋಳದ ಕಿರಣ್ ಅವರು ರೊನಾಲ್ಡ್ ಅಲ್ಫೋನ್ಸ್ ಅವರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ರೊನಾಲ್ಡ್ ಅಲ್ಫೋನ್ಸ್ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

 

Leave a Reply

Your email address will not be published. Required fields are marked *