Share this news

ಉಡುಪಿ: ಮಲ್ಪೆ ಬೀಚ್‌ನಲ್ಲಿ ನಿಯೋಜನೆಗೊಂಡಿದ್ದ ಜೀವರಕ್ಷಕ ದಳದ ಸಿಬ್ಬಂದಿ ಮೇಲೆ ಆರು ಮಂದಿ ಪ್ರವಾಸಿಗರ ತಂಡವೊಂದು ಗುರುವಾರ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಸಮುದ್ರವು ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಲೈಫ್‌ಗಾರ್ಡ್‌ ಉದ್ಯಾವರ-ಪಿತ್ರೋಡಿಯ ತೇಜ ಕೋಟ್ಯಾನ್ ಪ್ರವಾಸಿಗರಿಗೆ ಪದೇಪದೇ ಎಚ್ಚರಿಕೆ ನೀಡಿದರೂ, ಅದನ್ನು ನಿರ್ಲಕ್ಷಿಸಿ ಪ್ರವಾಸಿಗರು ಈಜುವುದನ್ನು ಮುಂದುವರಿಸಿದ್ದರು. ಅವರು ಅಪಾಯಕಾರಿ ಅಲೆಗಳ ಬಗ್ಗೆ ಪ್ರವಾಸಿಗರಿಗೆ ತಿಳಿಸಿದ್ದರೂ, ಗುಂಪು ಅದನ್ನು ನಿರ್ಲಕ್ಷಿಸಿ ಅಪಾಯದ ವಲಯದಲ್ಲಿ ಈಜಲು ಹೋಗಿದೆ. ಕೊನೆಗೆ ತೇಜ. ಕೋಟ್ಯಾನ್ ಈಜುವುದನ್ನು ಮುಂದುವರಿಸಬೇಡಿ ಗದರಿದಾಗ ಸಿಟ್ಟಿಗೆದ್ದ ಗುಂಪು ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ತಕ್ಷಣವೇ ಸ್ಥಳದಲ್ಲಿದ್ದ ಇತರ ಜೀವರಕ್ಷಕರು ಮತ್ತು ಗೃಹರಕ್ಷಕರು ಹಲ್ಲೆಕೋರರನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಕೆಎ 04 ಎಡಿ 8286 ನೋಂದಣಿ ಸಂಖ್ಯೆಯ ಸ್ವಿಫ್ಟ್ ಮಾರುತಿ ಕಾರಿನಲ್ಲಿ ಅವರು ಪರಾರಿಯಾಗಿದ್ದಾರೆ. ಘಟನೆ ಕುರಿತು ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ

 

 

 

 

 

                        

                          

 

Leave a Reply

Your email address will not be published. Required fields are marked *