
ಮಣಿಪಾಲ,ಜ .28: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಫೆಬ್ರವರಿ 3, ರಂದು ಮಂಗಳವಾರ ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ಇಂಟಿಗ್ರೇಟೆಡ್ ಲಿವರ್ & ಟ್ರಾನ್ಸ್‌ಪ್ಲಾಂಟ್ ಚಿಕಿತ್ಸೆ ನಡೆಸಲಾಗುತ್ತದೆ. ಇದು ಪ್ರತೀ ತಿಂಗಳ ಮೊದಲ ಮಂಗಳವಾರದಂದು ನಡೆಯಲಿದೆ.
ಕಸ್ತೂರ್ಬಾ ಆಸ್ಪತ್ರೆಯಲ್ಲಿ ಲಿವರ್ ಮತ್ತು ಲಿವರ್ ಕಸಿ ವೈದ್ಯಕೀಯ ಸೇವೆಗಳು ಲಭ್ಯವಿದ್ದು,ರೋಗಿಗಳಿಗೆ ಮನೆ ಬಾಗಿಲಲ್ಲೇ ಈ ಸೇವೆ ಲಭಿಸಿದ್ದು, ಕಳೆದ ತಿಂಗಳು ಮಣಿಪಾಲ ಇಂಟಿಗ್ರೇಟೆಡ್ ಲಿವರ್ & ಟ್ರಾನ್ಸ್‌ಪ್ಲಾಂಟ್ ಕ್ಲಿನಿಕ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ ಪ್ರತೀ ತಿಂಗಳ ಮೊದಲ ಮಂಗಳವಾರದಂದು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ.
ಮಣಿಪಾಲ್ ಆಸ್ಪತ್ರೆ ಬೆಂಗಳೂರಿನ ಎಚ್ ಪಿ ಬಿ & ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಕಸಿಯ ತಜ್ಞ ವೈದ್ಯ ಡಾ. ಜಯಂತ್ ರೆಡ್ಡಿ ಮತ್ತು ಎಚ್ ಪಿ ಬಿ & ಲಿವರ್ ಮತ್ತು ಪ್ಯಾಂಕ್ರಿಯಾಟಿಕ್ ಕಸಿಯ ತಜ್ಞ ವೈದ್ಯೆ ಡಾ. ದೀಪ್ತಿ ರಾಮಚಂದ್ರ ಈ ಚಿಕಿತ್ಸಾಲಯದ ನೇತೃತ್ವ ವಹಿಸಿದ್ದಾರೆ. ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಭಟ್ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಪ್ರಾಧ್ಯಾಪಕ ಮತ್ತು ಘಟಕ ಮುಖ್ಯಸ್ಥ ಡಾ. ಶಿರನ್ ಶೆಟ್ಟಿ ಅವರೊಂದಿಗೆ ಅವರು ನಿಕಟ ಸಹಯೋಗದಲ್ಲಿ ಕೆಲಸ ಮಾಡುತ್ತಾರೆ.
ತೀವ್ರ ಮತ್ತು ದೀರ್ಘಕಾಲದ ಲಿವರ್ ಕಾಯಿಲೆ, ಲಿವರ್ ಸಿರೋಸಿಸ್ ಮತ್ತು ಅದರ ತೊಡಕುಗಳು, ಲಿವರ್ ನಲ್ಲಿನ ಗೆಡ್ಡೆಗಳು ಮತ್ತು ಕ್ಯಾನ್ಸರ್, ಹೆಪಟೊರಿನಲ್ ಸಿಂಡ್ರೋಮ್, ಮಕ್ಕಳಲ್ಲಿನ ಲಿವರ್ ಕಾಯಿಲೆಗಳು ಮತ್ತು ಕಸಿ ಮಾಡುವ ಮೊದಲು ಅಥವಾ ನಂತರ ಮೌಲ್ಯಮಾಪನ ಅಗತ್ಯವಿರುವ ರೋಗಿಗಳಿಗೆ ಸಮಗ್ರ ಸೇವೆಗಳನ್ನು ನೀಡಲಾಗುತ್ತದೆ.
ತಜ್ಞರ ಭೇಟಿಗೆ ಅಪಾಯಿಂಟ್‌ಮೆಂಟ್ ಕಡ್ಡಾಯವಾಗಿದ್ದು,ಅಪಾಯಿಂಟ್‌ಮೆಂಟ್‌ಗಳು ಮತ್ತು ವಿಚಾರಣೆಗಳಿಗಾಗಿ, 6364469750 ಗೆ ಕರೆ ಮಾಡಬಹುದು ಅಥವಾ www.khmanipal.com ಗೆ ಭೇಟಿ ನೀಡಬಹುದಾಗಿದೆ.

.
.
.
.
