Share this news

ಕಾರ್ಕಳ: ಹಾಲಿನ ಬೆಲೆ ಏರಿಕೆಯನ್ನು ನೆಪವಾಗಿಸಿಕೊಂಡು ಶಾಸಕ ಸುನೀಲ್ ಕುಮಾರ್ ಕಾರ್ಕಳದಲ್ಲಿ ಹಾಲಿಲ್ಲದ ಚಾಹ ಮಾಡುವ ಮೂಲಕ ಪ್ರತಿಭಟನೆಯನ್ನು ಮಾಡಿದ್ದಾರೆ ಶಾಸಕರಿಗೆ ಈ ರೀತಿ ಪ್ರತಿಭಟನೆ ಸಾಮಾನ್ಯವಾಗಬಹುದು ಯಾಕೆಂದರೆ ಕಂಚೇ ಇಲ್ಲದೆ ಕಂಚಿನ ಪ್ರತಿಮೆ ಮಾಡಿದ ಮಹಾನುಭಾವರಿಗೆ ಹಾಲಿಲ್ಲದ ಚಹಾ ಮಾಡುವುದು ದೊಡ್ಡ ವಿಷಯವಲ್ಲ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅವದಿಯಲ್ಲಿ ಹಾಲಿನ ಉತ್ಪಾದನೆ ಹೆಚ್ಚಾಗಿ ರೈತರ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದೆ, ಉತ್ಪಾದನೆಯಾದ ಹೆಚ್ಚುವರಿ ಹಾಲನ್ನು ಪ್ಯಾಕೆಟಿಗೆ 50 ಮಿ.ಲೀ ಸೇರಿಸಿ ಮಾರಾಟ ಮಾಡಲಾಗುತ್ತದೆ, ಆ ಹೆಚ್ಚುವರಿ ಹಾಲಿಗೆ ಎರಡು ರೂ ಹೆಚ್ಚುವರಿಯಾಗಿ ಪಡೆಯಲಾಗುತ್ತದೆಯೇ ವಿನಃ ಬೆಲೆ ಏರಿಸಿಲ್ಲ . ಇದರಿಂದ ಹಾಲು ಉತ್ಪಾದಕರಿಗೆ ಲಾಭದಾಯಕವಾಗಿದೆ ವಿನಹ ಯಾರಿಗೂ ಹೊರೆಯಾಗಿಲ್ಲ, ಇದನ್ನು ರಾಜ್ಯದ ಮುಖ್ಯಮಂತ್ರಿಯೇ ಸ್ಪಷ್ಟಪಡಿಸಿದ್ದಾರೆ ಆದರೂ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆ ಅರ್ಥಹೀನ. ಹಾಲಿನ ಬೆಲೆಯನ್ನು ಇತರ ರಾಜ್ಯಗಳಿಗೆ ಹೋಲಿಸಿದರೆ ಪ್ರಧಾನ ಮಂತ್ರಿಗಳ ತವರು ಗುಜರಾತಿನಲ್ಲಿ ಅತೀ ಹೆಚ್ಚಾಗಿದೆ ಈ ಬಗ್ಗೆ ಬಿಜೆಪಿ ಪ್ರತಿಭಟನೆ ಇಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಆಹಾರ ಕಿಟ್ ನೀಡದೆ ಫಲಾನುಭವಿಗಳ ಪಟ್ಟಿ ಮಾಡುವುದು, ಅನುದಾನ ಬಿಡುಗಡೆಯಾಗದೆ ಗುದ್ದಲಿ ಪೂಜೆ ಮಾಡುವುದು, ಕಾಮಗಾರಿ ಕಳಪೆಯಾದರೂ ಬಿಲ್ ಪಾವತಿಸುವುದು. ಇದು ನಮ್ಮ ಶಾಸಕರ ವಿಶೇಷತೆ, ಈ ಬಾರಿ ಹಾಲಿಲ್ಲದ ಚಾಹ ಮಾಡುವುದು ಅದೇ ಪಟ್ಟಿಗೆ ಸೇರಿದೆ ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಪುರಸಭಾ ಸದಸ್ಯ ಶುಭದರಾವ್ ವ್ಯಂಗ್ಯವಾಡಿದ್ದಾರೆ.

 

 

                        

                          

 

 

 

 

 

                        

                          

 

 

 

 

 

Leave a Reply

Your email address will not be published. Required fields are marked *