Share this news

ಕಾರ್ಕಳ: ಮಾಳ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಮಾಳ ಇದರ 2024-25 ನೇ ಆರ್ಥಿಕ ವರ್ಷದಲ್ಲಿ 184 ಕೋಟಿ ರೂ. ವ್ಯವಹಾರ ನಡೆಸಿ ರೂ. 1.10 ಕೋಟಿ ನಿವ್ವಳ ಲಾಭ ಗಳಿಸಿದೆ. ಆರ್ಥಿಕ ಸಾಲಿನಲ್ಲಿ ಶೇ. 100 ಸಾಲ ವಸೂಲಾತಿ ಪ್ರಗತಿಯನ್ನು ಸಾಧಿಸಲಾಗಿದ್ದು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಿAದ “ಸಾಧನಾ ಪ್ರಶಸ್ತಿ” ಲಭಿಸಿದ್ದು ಒಟ್ಟು ಲಾಭದಲ್ಲಿ ಸದಸ್ಯರಿಗೆ ಶೇ. 18 ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ ಶೆಟ್ಟಿಯವರು ಹೇಳಿದರು. ಅವರು ಬಜಗೋಳಿಯ ಬಿಲ್ಲವ ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಜರಗಿದ ಸಂಘದ 2024-2025 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಎಂ ಸುವರ್ಣ ವಾರ್ಷಿಕ ವರದಿ, ಲೆಕ್ಕಪರಿಶೋಧನಾ ವರದಿ, ಆರ್ಥಿಕ ತಖ್ತೆಗಳನ್ನು ಸಭೆಯಲ್ಲಿ ಮಂಡಿಸಿ ಸಂಘವು 61 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು ಕಳೆದ ಸಾಲಿಗಿಂತ ಠೇವಣಿಗಳಲ್ಲಿ ಶೇ. 12 ಹಾಗೂ ಸಾಲಗಳಲ್ಲಿ ಶೇ. 14 ಹೆಚ್ಚಳವಾಗಿದೆ. ಪ್ರಸಕ್ತ ಸಾಲಿನಲ್ಲಿ ಕೃಷಿಕ ಸದಸ್ಯರಿಗೆ ರೂ. 23.74 ಕೋಟಿ ಶೂನ್ಯ ಬಡ್ಡಿದರದ ಕೃಷಿ ಸಾಲ ವಿತರಿಸಲಾಗಿದ್ದು ಒಟ್ಟಾರೆ ರೂ. 43.54 ಕೋಟಿ ಸದಸ್ಯರ ಸಾಲ ಹೊರಬಾಕಿ ಇದ್ದು ಆರ್ಥಿಕ ವರ್ಷದಲ್ಲಿ ಆಡಿಟ್ ವರ್ಗಿಕರಣದಲ್ಲಿ ‘ಎ’ ವರ್ಗ ಪಡೆದು ಸಾಧನೆ ಮಾಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ.ಯಲ್ಲಿ ಶೇ. 90 ಕ್ಕಿಂತ ಅಧಿಕ ಅಂಕ ಗಳಿಸಿದ ಒಟ್ಟು 31 ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಜಗೋಳಿ ಶಾಖೆಯಲ್ಲಿರುವ ಕ್ಯಾಂಪ್ಕೋ ಉಪಶಾಖೆಯ ಮುಖಾಂತರ ವರದಿ ವರ್ಷದಲ್ಲಿ ಅತೀ ಹೆಚ್ಚಿನ ಅಡಿಕೆ ಮಾರಾಟ ಮಾಡಿದ ಸಂಘದ ಸದಸ್ಯರುಗಳಾದ ಉದಯ ಕುಮಾರ್ ಕೆ., ಅನಿಲ್ ಎಸ್. ಪೂಜಾರಿ, ಅನಿತಾ ಪ್ರವೀರ್ ಪಾಂಡಿ ಇವರನ್ನು ಸನ್ಮಾನಿಸಲಾಯಿತು. ಸಿಬ್ಬಂದಿ ಶ್ರೀ ಕಿರಣ್ ಪೂಜಾರಿ ಸಾಧಕರ ವಿವರಗಳನ್ನು ಸಭೆಯಲ್ಲಿ ವಿವರಿಸಿದರು.

ಸಭೆಯಲ್ಲಿ ಸಂಘದ ಸದಸ್ಯರು ಸಂಘದ ಅಭಿವೃದ್ಧಿಯ ಬಗ್ಗೆ ಉತ್ತಮ ಸಲಹೆ ಸೂಚನೆಗಳನ್ನು ನೀಡಿದರು. ಸಂಘದ ಉಪಾಧ್ಯಕ್ಷರಾದ ಶ್ರೀ ನಾಗೇಶ್ ಭಂಡಾರಿ, ನಿರ್ದೇಶಕರುಗಳಾದ ಶ್ರೀ ಅನಿಲ್ ಎಸ್.ಪೂಜಾರಿ, ಶ್ರೀ ವೆಂಕಟೇಶ್ ಗೋರೆ ಎಚ್., ಶ್ರೀ ಅಕ್ಷಯ ಕುಮಾರ್, ಶ್ರೀ ಸುಧಾಕರ ಡೋಂಗ್ರೆ, ಶ್ರೀ ಸುಮಿತ್ ಸಾಲಿಯಾನ್, ಶ್ರೀ ನಂದುಗೋಪನ್ ಕೆ.ಆರ್., ಶ್ರೀಮತಿ ಉಷಾ ಶೆಟ್ಟಿ, ಶ್ರೀ ರಾಜೇಶ್ವರ ನಾಯ್ಕ, ಶ್ರೀ ಅಣ್ಣಿ ಪರವ, ವೃತ್ತಿಪರ ನಿರ್ದೇಶಕರಾದ ಶ್ರೀ ಜಯರಾಮ ಬಂಗೇರ, ಲೆಕ್ಕಪರಿಶೋಧಕರಾದ ಶ್ರೀ ರಮೇಶ್ ರಾವ್ ಕೆ. ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ನವೀನ್ ಎಂ. ಸುವರ್ಣ ಸಭಾ ಕಾರ್ಯಕ್ರಮ ನಿರೂಪಿಸಿದರು. ಬಜಗೋಳಿ ಶಾಖೆಯ ಪ್ರಭಾರ ಶಾಖಾ ವ್ಯವಸ್ಥಾಪಕರಾದ ಶ್ರೀ ದುಂಡಿರಾಜ್ ಜೋಶಿ ವಂದಿಸಿದರು. ಸಂಘದ ಸಿಬ್ಬಂದಿವರ್ಗದವರು ಸಹಕರಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *