ಕಾರ್ಕಳ: ತಾಲೂಕಿನ ಮಾಳ ನಿವಾಸಿಯೊಬ್ಬರು ಎದೆನೋವಿನಿಂದ ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಸಂಜೀವ (58)ಮೃತಪಟ್ಟ ದುರ್ದೈವಿ.
ಮಾಳದ ತನ್ನ ಸಹೋದರಿಯ ಮನೆಯಲ್ಲಿ ವಾಸವಿದ್ದ ಮೃತ ಸಂಜೀವ ಅವರು ಸೋಮವಾರ ಸಂಜೆಯ ವೇಳೆಗೆ ಮನೆಯಲ್ಲಿ ವಾಂತಿ ಮಾಡಿಕೊಂಡು ಎದೆನೋವಿನಿಂದ ತೀವೃ ಅಸ್ವಸ್ಥಗೊಂಡಿದ್ದರು.ಕೂಡಲೇ ಸಹೋದರಿಯ ಪುತ್ರ ಸಂತೋಷ್ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಸಂಜೀವ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.