ಕಾರ್ಕಳ: ಅನ್ಯಕೋಮಿನ ವ್ಯಕ್ತಿಯೊಬ್ಬ ಪತ್ರಕರ್ತನ ಸೋಗಿನಲ್ಲಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ವಾಪಾಸಾಗುತ್ತಿದ್ದ ವ್ಯಕ್ತಿಯೊಬ್ಬರ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ತೆಳ್ಳಾರಿನ ಮೇಲಿನ ಕುಕ್ಕಾಜೆ ರಸ್ತೆಯಲ್ಲಿ ಏ.3 ರಂದು ನಡೆದಿದೆ.
ಕುಕ್ಕಾಜೆ ಎಂಬಲ್ಲಿ ಮುಸ್ಲಿಂ ವ್ಯಕ್ತಿ ಜಹೀರ್ ಎಂಬವರ ಮನೆಯಲ್ಲಿ ದುರ್ಗಾಪರಮೇಶ್ವರಿ ದೇವಿಯ ಆರಾಧನೆ ನಡೆಯುತ್ತಿತ್ತು.ಈ ಮನೆಯಲ್ಲಿ ದೇವಿ ದರ್ಶನ ಕೂಡ ನಡೆಯುತ್ತಿತ್ತು. ಈ ಉದ್ದೇಶದಿಂದ ವಿಶ್ವನಾಥ್ ಅವರು ತಮ್ಮ ಕುಟುಂಬದ ಸಮಸ್ಯೆ ಪರಿಹರಿಸಲು ಜಹೀರ್ ಮನೆಗೆ ಬಂದಿದ್ದರು ಎನ್ನಲಾಗಿದೆ.ಬಳಿಕ ವಿಶ್ವನಾಥ್ ಸ್ಕೂಟರ್ ನಲ್ಲಿ ವಾಪಾಸು ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿ ರಿಯಾಜ್ ವಿಶ್ವನಾಥ್‌ರ ಸ್ಕೂಟರನ್ನು ತಡೆದು ನಿಲ್ಲಿಸಿ ನೀನು ಇಲ್ಲಿಗೆ ಯಾಕೆ ಬಂದಿದ್ದೆ. ನಿನಗೆ ಬೇರೆ ದೇವಸ್ಥಾನ ಇಲ್ಲವೇ ಎಂದು ಬೈದಾಗ,ಈ ವೇಳೆ ಅಲ್ಲಿಗೆ ಬಂದ ರಿಯಾಜ್ ನ ಮಕ್ಕಳಾದ ರಿಯಾನ್ ಮತ್ತು ರಿಪ್ಪಾನ್ ಹಾಗೂ ರಿಮಾನ್ ಕೆಳಗೆ ಬಿದ್ದ ವಿಶ್ವನಾಥ್ ರನ್ನು ತುಳಿದು ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದು ಬೊಬ್ಬೆ ಹೊಡೆದಾಗ ಗಲಾಟೆ ಬಿಡಿಸಲು ದೇವಸ್ಥಾನದ ಅರ್ಚಕರಾದ ಜಾಹೀರ್ ಮತ್ತು ನಜೀರ್ ರವರು ಬಂದಿದ್ದು ಆರೋಪಿ ರಿಯಾಜ್ ನು ಜಾಹೀರ್ ರವರಿಗೂ ಹಲ್ಲೆ ನಡೆಸಿ ವಿಶ್ವನಾಥ್ ಗೆ ಜೀವ ಬೆದರಿಕೆ ಹಾಕಿದ್ದಾನೆ. ಹಲ್ಲೆಯಿಂದ ಗಾಯಗೊಂಡ ವಿಶ್ವನಾಥ್ ಚಿಕಿತ್ಸೆಗಾಗಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಿಯಾಜ್ ತೆಳ್ಳಾರು ಪರಿಸರದಲ್ಲಿ ತಾನೊಬ್ಬ ಪತ್ರಕರ್ತನೆಂದು ಓಡಾಡಿಕೊಂಡು ಫೋಸ್ ನೀಡುತ್ತಿದ್ದ.ಇದಲ್ಲದೇ ತನ್ನ ಮನೆಯ ಆವರಣದಲ್ಲಿ ಅಸ್ತ್ರ ಮಿಡೀಯಾ ಎಂದು ಬೋರ್ಡ್ ಅಳವಡಿಸಿ ಪತ್ರಕರ್ತನ ಸೋಗಿನಲ್ಲಿ ವಸೂಲಿ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ. ಈತನ ವಿರುದ್ಧ ಕಾರ್ಕಳ ಪತ್ರಕರ್ತರ ಸಂಘದಿಂದ ಪೊಲೀಸರಿಗೆ ದೂರು ನೀಡಲಾಗಿತ್ತು.