Share this news

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಸರ್ಕಾರವು ಹೃದಯಾಘಾತ ಪ್ರಕರಣಗಳ ಹೆಚ್ಚಳಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಮಾಡಲು ತಾಂತ್ರಿಕ ಸಲಹಾ ಸಮಿತಿಗೆ ಸೂಚಿಸಿತ್ತು.ಅದರಂತೆ ಸಮಿತಿ ವರದಿಯನ್ನೂ ನೀಡಿತ್ತು. ಈ ವರದಿಗಳಲ್ಲಿ ಚಾಲಕರಲ್ಲಿಯೇ ಹೃದಯಾಘಾತ ಪ್ರಕರಣಗಳು ಹೆಚ್ಚು ಕಂಡುಬರುತ್ತಿರುವುದು ಉಲ್ಲೇಖವಾಗಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಸಲಹೆ ಕೂಡ ನೀಡಲಾಗಿತ್ತು.

ಈ ಹಿನ್ನಲೆಯಲ್ಲಿ ಇದೀಗ ಆರೋಗ್ಯ ಇಲಾಖೆ ಚಾಲಕರ ಆರೋಗ್ಯದ ಮೇಲೆ ನಿಗಾ ವಹಿಸಲು ಮುಂದಾಗಿದ್ದು, ಅದಕ್ಕಾಗಿ ಹೊಸ ನಿಯಮ ರೂಪಿಸಲು ರೂಪುರೇಷೆ ಸಿದ್ಧಪಡಿಸಿದೆ. ಆಟೋ, ಕ್ಯಾಬ್, ಬಸ್​​ ಚಾಲಕರಿಗೆ ಡಿಎಲ್ (ಚಾಲನಾ ಪರವಾನಗಿ)​ ಹೇಗೆ ಕಡ್ಡಾಯವೋ ಅದೇ ರೀತಿ ಇನ್ಮುಂದೆ , ಹೆಲ್ತ್​ ಚೆಕಪ್​ ಸರ್ಟಿಫಿಕೇಟ್​ (ಹೆಲ್ತ್ ಕಾರ್ಡ್) ಕಡ್ಡಾಯ ಮಾಡಲು ಚಿಂತನೆ ನಡೆಸಿದೆ. ಅಷ್ಟೇ ಅಲ್ಲದೆ ಚಾಲಕರಿಗೆ ಇಸಿಜಿ, ಬಿಪಿ, ಶುಗರ್​ ಪರೀಕ್ಷೆ ಮಾಡಿಸಿ ಅವರು ಫಿಟ್​ ಇದ್ದಾರೋ ಇಲ್ಲವೋ ಎಂಬ ಪ್ರಮಾಣಪತ್ರ ನೀಡಲಾಗುತ್ತದೆ.

ಡಿಎಲ್​ ಪಡೆಯುವಾಗ, ರಿನೀವಲ್ ಮಾಡಿಸುವಾಗ, ಜೊತೆಗೆ ಎಫ್​ಸಿ ಮಾಡಿಸುವಾಗ ಚಾಲಕರಿಗೆ ಹೆಲ್ತ್ ಕಾರ್ಡ್​ ನೀಡುವಂತೆ ಇಲಾಖೆ ನಿಯಮ ರೂಪಿಸಲಿದೆ. ಈಗಾಗಲೇ ಸಂಬಂಧ ಪಟ್ಟ ಸಾರಿಗೆ ಇಲಾಖೆ, ಟ್ರಾಫಿಕ್ ಪೊಲೀಸ್ ಇಲಾಖೆ ಜೊತೆಗೆ ಕೂಡಾ ಚರ್ಚಿಸಿದ್ದು, ಆರೋಗ್ಯ ಇಲಾಖೆಯಿಂದಲೇ ಹೆಲ್ತ್​ ಚೆಕಪ್ ಮಾಡಿಸಬೇಕಾ ಅಥವಾ, ಬೇರೆಡೆಯಿಂದ ಪ್ರಮಾಣಪತ್ರ ಸಲ್ಲಿಕೆ ಮಾಡಲು ಸೂಚಿಸಬೇಕೇ ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಆರೋಗ್ಯ ಇಲಾಖೆ ಕಡ್ಡಾಯ ಹೆಲ್ತ್​ ಸರ್ಟಿಫಿಕೇಟ್​ ಜಾರಿಗೆ ಭಾಗಶಃ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಡಿಸುವ ನಿರೀಕ್ಷೆ ಇದೆ.

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *