Share this news

ಮಂಗಳೂರು : ಮರವೂರಿನ ಫಲ್ಗುಣಿ ನದಿಯಲ್ಲಿ ಈಜಲು ತೆರಳಿ ನೀರುಪಾಲಾಗಿದ್ದ ಇಬ್ಬರು ಯುವಕರ ಮೃತದೇಹವು ಪತ್ತೆಯಾಗಿದೆ.

ಸೆ.29ರ ಭಾನುವಾರ ಈಜಲು ತೆರಳಿದ್ದ ನಾಲ್ಕು ಮಂದಿ ಸ್ನೇಹಿತರ ಪೈಕಿ ಇಬ್ಬರು ನೀರಿನ ಸುಳಿಗೆ ಸಿಲುಕಿ ನೀರುಪಾಲಾದ ಘಟನೆಗೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಉರ್ವಸ್ಟೋರಿನ ಅನೀಶ್ (19) ಹಾಗೂ ಕೊಟ್ಟಾರ ಚೌಕಿ ನಿವಾಸಿ ಸುಮಿತ್ (20) ಅವರ ಮೃತದೇಹವನ್ನು ಮುಳುಗು ತಜ್ಞರು ಮೇಲೆಕ್ಕೆತ್ತಿದ್ದಾರೆ.

ಅನೀಶ್ ಮೃತದೇಹ ಸೆ.30ರ ಸೋಮವಾರ ಬೆಳಗ್ಗೆ ಪತ್ತೆಯಾಗಿತ್ತು, ಸುಮಿತ್ ರಿಗಾಗಿ ಎನ್ ಡಿ ಆರ್ ಎಫ್ ಮತ್ತು ಎಸ್ ಟಿ ಆರ್ ಎಫ್ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದರು. ಮಂಗಳವಾರ ಬೆಳಗ್ಗೆ ಸುಮಿತ್ ಮೃತದೇಹ ಪತ್ತೆಯಾಗಿದೆ. L ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನದಿಯಲ್ಲಿ ಈಜಲು ತೆರಳಿದ್ದ ನಾಲ್ವರ ಪೈಕಿ ಕೋಡಿಕಲ್ ನಿವಾಸಿ ಅರುಣ್ ಮತ್ತು ಕೋಡಿಕಲ್ ಮಾಳೂರು ನಿವಾಸಿ ದೀಕ್ಷಿತ್ ಪ್ರಾಣಾಪಾಯದಿಂದ ಪಾರಾಗಿದ್ದರು.

 

Leave a Reply

Your email address will not be published. Required fields are marked *