ಮಂಗಳೂರು: ಜೇಸಿಐ ಮಂಗಳೂರು ಶ್ರೇಷ್ಠ ಘಟಕದ ಆತಿಥ್ಯದಲ್ಲಿ ಜೇಸಿಐ ಭಾರತದ ವಲಯ 15ರ ಅಭಿವೃದ್ಧಿ ಮತ್ತು ಬೆಳವಣಿಗೆ ಹಾಗೂ ವ್ಯವಹಾರ ಸಮ್ಮೇಳನ ಜುಲೈ 28ರಂದು ನಡೆಯಿತು.
ಈ ಸಂದರ್ಭದಲ್ಲಿ ಜೇಸಿಐ ಕಾರ್ಕಳ ರೂರಲ್ ಘಟಕದ ಪೂರ್ವಾಧ್ಯಕ್ಷೆ ಜೇಸಿ ವೀಣಾ ರಾಜೇಶ್ ಭಂಡಾರಿಯವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೇಸಿಐ ಇಂಡಿಯಾ ಫೌಂಡೇಶನ್‌ನ ನಿರ್ದೇಶಕರಾದ ಪಿಪಿಪಿ ಅಲನ್ ರೋಹನ್ ವಾಸ್, ವಲಯಾಧ್ಯಕ್ಷರಾದ ಜೇಸಿಐ ಸೆನೆಟರ್ ಗಿರೀಶ್ ಎಸ್. ಪಿ., ವ್ಯವಹಾರ ವಿಭಾಗದ ನಿರ್ದೇಶಕರಾದ ಜೆಎಂಎಫ್ ಸುನಿಲ್ ಕುಮಾರ್, ವಲಯ ಉಪಾಧ್ಯಕ್ಷರಾದ ಜೆಸಿ ರಾಕೇಶ್ ಹೊಸಬೆಟ್ಟು, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕರಾದ ಜೆಎಫ್‌ಪಿ ರವಿಚಂದ್ರ ಪಾಟಾಳಿ, ಜೆಎಸಿಯ ನಿಕಟ ಪೂರ್ವ ವಲಯಾಧ್ಯಕ್ಷರಾದ ಜೆಎಫ್‌ಡಿ ಸತೀಶ್ ಪೂಜಾರಿ, ಘಟಕಾಧ್ಯಕ್ಷರಾದ ಜೇಸಿ ಸಂತೋಷ್ ಬಂಗೇರ, ಪೂರ್ವ ವಲಯಾಧಿಕಾರಿ ಜೇಸಿ ಮೋಹನ ನಕ್ರೆ, ಲೇಡಿ ಜೇಸಿ ಸಂಯೋಜಕಿ ಜೇಸಿ ಮಮತಾ ಸಂತೋಷ್, ಜೇಸಿ ವಿಜಯ ಸತೀಶ್, ಜೆಜೆಸಿಗಳಾದ ದಿಯಾ ಮತ್ತು ರಿಯಾ ಉಪಸ್ಥಿತರಿದ್ದರು.
`