ಉಡುಪಿ, ಸೆ. 03: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆಸಹಯೋಗದಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು ವಿದ್ಯಾನಗರದಲ್ಲಿ ಉಡುಪಿ ಜಿಲ್ಲಾ ಮಟ್ಟದ ಬಾಲಕ ಬಾಲಕಿಯರ ಟೇಬಲ್ ಟೆನ್ನಿಸ್ ಪಂದ್ಯಾಟ ನಡೆಯಿತು.
ಉದ್ಘಾಟನಾ ಸಮಾರಂಭವನ್ನು ಅಂತರಾಷ್ಟ್ರೀಯ ಟೇಬಲ್ ಟೆನ್ನಿಸ್ ಫೆಡರೇಶನ್‌ನ ಅಂತರಾಷ್ಟ್ರೀಯ ನಿರ್ಣಾಯಕರಾದ ಶ್ರೀರಾಮ್ ಕೌಡೂರು ಉದ್ಘಾಟಿಸಿ ಮಾತನಾಡಿ, ಶಿಕ್ಷಣದ ಜೊತೆಜೊತೆಗೆ ನಿರ್ದಿಷ್ಟಕ್ರೀಡೆಯಲ್ಲಿ ತೊಡಗಿಸಿಕೊಳ್ಳುವದರಿಂದ ಹವ್ಯಾಸವಾಗಿ ಜೀವನದುದ್ದಕ್ಕೂ ಶಿಸ್ತು ಬದ್ಧತೆಗೆ, ಆರೋಗ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದರು. ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಉಡುಪಿ ಜಿಲ್ಲೆಯ ಉಪ ನಿರ್ದೇಶಕ ಮಾರುತಿ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭ ಶ್ರೀರಾಮ್ ಕೌಡೂರು ಇವರನ್ನು ಟೇಬಲ್ ಟೆನ್ನಿಸ್‌ಕ್ರೀಡೆಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಕ್ರೀಡಾ ಸಂಯೋಜಕರಾದ ದಿನೇಶ್‌ಕುಮಾರ್ ಶೆಟ್ಟಿ ಮತ್ತು ಉಡುಪಿ ಜಿಲ್ಲಾ ಪದವಿಪೂರ್ವದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಜ್ಞಾನಸುಧಾಶಿಕ್ಷಣ ಸಂಸ್ಥೆಗಳು ಮತ್ತುಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್‌ಟ್ರಸ್ಟ್ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದ ಮುಖ್ಯಅತಿಥಿಯಾಗಿ, ಉಡುಪಿ ಜಿಲ್ಲಾಅನುದಾನಿತ ಮತ್ತುಅನುದಾನರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಡಾ. ದಯಾನಂದ ಪೈ ಭಾಗವಹಿಸಿ ಪ್ರಶಸ್ತಿಗಳನ್ನು ವಿತರಿಸಿ ಶುಭಹಾರೈಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನುಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಪ್ರಾಂಶುಪಾಲರಾದ ದಿನೇಶ ಎಂ. ಕೊಡವೂರು ವಹಿಸಿದ್ದರು. ಮಣಿಪಾಲ ಜ್ಞಾನಸುಧಾದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀ ಅರುಣ್‌ಕುಮಾರ್ ವಂದಿಸಿದರು, ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.
ಫಲಿತಾಂಶದ ವಿವರ
ಬಾಲಕಿಯರ ವಿಭಾಗ – ಪ್ರಥಮ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವಕಾಲೇಜು, ವಿದ್ಯಾನಗರ, ದ್ವಿತೀಯ :ಎಂ.ಜಿ.ಎಂ. ಪ.ಪೂ. ಕಾಲೇಜುಉಡುಪಿ,
ಬಾಲಕರ ವಿಭಾಗ – ಪ್ರಥಮ :ಎಂ.ಜಿ.ಎಂ. ಪ.ಪೂ. ಕಾಲೇಜು ಉಡುಪಿ, ದ್ವಿತೀಯ : ವಿದ್ಯೋದಯ ಪ.ಪೂ. ಕಾಲೇಜುಉಡುಪಿ