ಉಡುಪಿ: ಮಣಿಪಾಲ ದಶರಥನಗರದ ಡೌನ್ ಟೌನ್ ಲಾಡ್ಜ್ ಗೆ ದಾಳಿ ನಡೆಸಿದ ಪೊಲೀಸರು, ಮಾದಕವಸ್ತು ಹೊಂದಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಪು ನಿವಾಸಿ ಮಹಮ್ಮದ್ ಅಜರುದ್ದೀನ್ ಯಾನೆ ಮಂಚಕಲ್ ಅಜರುದ್ದೀನ್, ಪುಣೆಯ ರಾಜೇಶ್ ಪ್ರಕಾಶ್ ಜಾಧವ್ ಹಾಗೂ ಮಲ್ಪೆಯ ನಾಜೀಲ್ ಯಾನೆ ಆಶಿಫ್ ಬಂಧಿತ ಆರೋಪಿಗಳು.
ಈ ಮೂವರು ಆರೋಪಿಗಳು ಮಾದಕವಸ್ತುಗಳೊಂದಿಗೆ ಡೌನ್ ಟೌನ್ ಲಾಡ್ಜ್ ನ ರೂಮ್ ನಂ. 106ರಲ್ಲಿ ವಾಸ್ತವ್ಯ ಹೂಡಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬಂಧಿತರಿಂದ 40 ಸಾವಿರ ಮೌಲ್ಯದ 13.70 ಗ್ರಾಂ ತೂಕದ ಎಂಡಿಎಂಎ, 10,500 ರೂಪಾಯಿ ಮೌಲ್ಯದ 225 ಗ್ರಾಂ ಗಾಂಜಾ , ಪ್ಲಾಸ್ಟಿಕ್ ಸಣ್ಣ ಸಣ್ಣ ಕವರ್ 15, 5 ಸಿರಿಂಜ್‌ಗಳು , Sterile water 5 ml ನ 3 ಪ್ಲಾಸ್ಟಿಕ್ ಸೀಸೆ ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.