Share this news

ಉಡುಪಿ: ಶಿಕ್ಷಣಕ್ಕೆ ಕ್ರೀಡೆ ಯಾವತ್ತೂ ಅಡ್ಡಿ ಬರಲಾರದು, ನಿಮ್ಮಲ್ಲೂ ಕ್ರೀಡಾ ಸಾಧನೆ ಮಾಡುವ ಸಾಮರ್ಥ್ಯ ಇದೆ ಅದನ್ನು ಉಪಯೋಗಿಸಿಕೊಂಡು ಉತ್ತಮ ಕ್ರೀಡಾ ಸಾಧಕರಾಗಿ ಮೂಡಿಬನ್ನಿ ಎಂದು ಸೌತ್ ಏಷ್ಯನ್ ಮೆಡಲಿಸ್ಟ್ ಮತ್ತು ಭಾರತೀಯ ರೈಲ್ವೆ ಇಲಾಖೆಯ ಸಿಬ್ಬಂದಿಯೂ ಆಗಿರುವ ಶ್ರೀಮತಿ ಕರಿಷ್ಮಾ ಸನಿಲ್ ಹೇಳಿದರು. ಇವರು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ನಾಗಬನ ಕ್ಯಾಂಪಸ್ ಮತ್ತು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರ ಜಂಟಿಯಾಗಿ ವಿದ್ಯಾನಗರ ಗ್ರೀನ್ಸ್, ಮಣಿಪಾಲದಲ್ಲಿ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಐಕ್ಯಮ್ ಸ್ಪೋಟ್ಸ್ ಸೈನ್ಸ್ನ ಮ್ಯಾನೆಜಿಂಗ್ ಡೈರೆಕ್ಟರ್ ಆಗಿರುವ ರೋಹನ್ ಕೆ ಇವರು ಮಾತನಾಡಿ ಎಲ್ಲಾ ಕ್ರೀಡೆಗಳಿಗೂ ಸಮಾನ ಆದ್ಯತೆ ಸಿಗಬೇಕು. ನಮ್ಮಲ್ಲಿರುವ ಮಾನವ ಸಂಪನ್ಮೂಲವನ್ನು ಸದುಪಯೋಗಪಡಿಕೊಂಡರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಮುಂಚೂಣಿಯಲ್ಲಿರಲು ಸಾಧ್ಯವಾಗುವುದು ಎಂದರು. ಇದೇ ಸಂದರ್ಭದಲ್ಲಿ ಆಗಮಿಸಿದ ಗಣ್ಯರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಅರ್ನ್ ಎಂಡ್ ಲರ್ನ್ ಬಿಸ್ನೆಸ್ ಫೇರ್ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಉಡುಪಿ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲರುಗಳಾದ ಪ್ರಕಾಶ್ ಜೋಗಿ, ಹೇಮಂತ್ ನಾಯಕ್, ಉಪನ್ಯಾಸಕರು, ಉಪನ್ಯಾಸಕೇತರರು ಉಪಸ್ಥಿತರಿದ್ದರು. ಮಣಿಪಾಲ ಜ್ಞಾನಸುಧಾ ಉಪ ಪ್ರಾಂಶುಪಾಲರಾದ ರವಿ ಜಿ ಸ್ವಾಗತಿಸಿ ಗಣಿತಶಾಸ್ತ್ರ ಉಪನ್ಯಾಸಕಿ ಕುಮಾರಿ ನಕ್ಷಾ ಕಲ್ಕೂರ ಕಾರ್ಯಕ್ರಮ ನಿರೂಪಿಸಿ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ಅರುಣ್ ಕುಮಾರ್ ವಂದಿಸಿದರು.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *