ಕಾರ್ಕಳ: ಹದಗಟ್ಟಿರುವ ಜೀವನ ಶೈಲಿಯ ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ನಿತ್ಯ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಂಡು ಆಟವಾಡುವುದರಿಂದ ಸದೃಢ ದೇಹ,ಸ್ವಸ್ಥ ಮನಸ್ಸು ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಸಂಘಟನಾತ್ಮಕವಾಗಿ ಎಲ್ಲರನ್ನು ಒಂದುಗೂಡಿಸಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಕಳ ಮರಾಠಿ ಸಂಘದ ಕಾರ್ಯಕ್ರಮ ಶ್ಲಾಘನೀಯ ಎಂದು ಕೆನರಾ ಬ್ಯಾಂಕ್ ಪ್ರಾದೇಶಿಕ ನಿವೃತ್ತ ಮ್ಯಾನೇಜರ್ ಸೀತಾರಾಮ ನಾಯ್ಕ್ ಹೇಳಿದರು.
ಅವರು ಭಾನುವಾರ ಕಾರ್ಕಳ-ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘದ ವತಿಯಿಂದ ಕಾರ್ಕಳ ತಾಲೂಕು ಕ್ರೀಡಾಂಗಣದಲ್ಲಿ ಶಿವಾಜಿ ಜಯಂತಿ ಪ್ರಯುಕ್ತ ನಡೆದ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ಪುರುಷರ ವಾಲಿಬಾಲ್,ಹಗ್ಗ ಜಗ್ಗಾಟ,ಥ್ರೋಬಾಲ್ ಅಥ್ಲೆಟಿಕ್ ಕ್ರೀಡಾಕೂಟ- ಕ್ರೀಡಾ ಸಂಭ್ರಮದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನಿವೃತ್ತ ಶಿಕ್ಷಕ ಅಜೆಕಾರು ಜನಾರ್ದನ ನಾಯ್ಕ್ ಕ್ರೀಡಾಕೂಟದ ಧ್ವಜಾರೋಹಣ ಗೈದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಾಧಿಕಾರಿ ರವೀಂದ್ರ ನಾಯ್ಕ್ ಚಾಂತಾರು ಉಪಸ್ಥಿತರಿದ್ದು ಸ್ಪರ್ಧಾಳುಗಳಿಗೆ ಶುಭಕೋರಿದರು.
ಸಂಘದ ಅಧ್ಯಕ್ಷರಾದ ಶೇಖರ ಕಡ್ತಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಕಸ್ತೂರಿ ಶೇಖರ್ ನಾಯ್ಕ್, ಶಂಕರ್ ನಾಯ್ಕ್ ದುರ್ಗಾ, ಉಮೇಶ್ ನಾಯ್ಕ್ ಸೂಡ,ನಾಗೇಂದ್ರ ನಾಯ್ಕ್ ಹೆಬ್ರಿ, ಕಾರ್ಯದರ್ಶಿ ಹರೀಶ್ ಸಾಣೂರು,ಶ್ರೀನಿವಾಸ ನಾಯ್ಕ್ ನಕ್ರೆ, ಶಶಿಕಲಾ ಹಿರ್ಗಾನ, ಅಶೋಕ ನಾಯ್ಕ್ ಕುಕ್ಕುಜೆ,ಮುಡಾರು ಗೋಪಾಲ ನಾಯ್ಕ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷೆ ಸುಗಂಧಿ ನಾಯ್ಕ್ ಶಿವಪುರ ಸ್ವಾಗತಿಸಿದರು. ರೂಪೇಶ್ ನಾಯ್ಕ್ ಮತ್ತು ಪದ್ಮಾಕರ ದುರ್ಗ ನಿರೂಪಿಸಿದರು. ಕ್ರೀಡಾ ಕಾರ್ಯದರ್ಶಿ ಪವನ್ ದುರ್ಗಾ ವಂದಿಸಿದರು.
ಸಮರೋಪ ಸಮಾರಂಭದಲ್ಲಿ ಭಾರತೀಯ ನಿವೃತ್ತ ಭೂಸೇನಾ ಯೋಧ ಕೇಶವ ನಾಯ್ಕ್ ಗಂಜಿಮಠ ಹಾಗೂ ದ.ಕ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಮಹಾಲಿಂಗ ನಾಯ್ಕ್, ವಿ.ಸುಧಾಕರ ನಾಯ್ಕ್ ವಿಜೇತರಿಗೆ ಬಹುಮಾನ ವಿತರಿಸಿದರು.ಈ ಸಂದರ್ಭದಲ್ಲಿ
ದಿ| ಶೇಖರ್ ನಾಯ್ಕ್ ಮುದ್ರಾಡಿ, ದಿ|ವಿ.ದೇಜಪ್ಪ ನಾಯ್ಕ್ ಕಾರ್ಕಳ,ಕೆ.ಪಿ. ನಾಯ್ಕ್ ಮಾಳ ಇವರ ಸ್ಮರಣಾರ್ಥ ನಡೆದ ಉಡುಪಿ-ದಕ್ಷಿಣ ಕನ್ನಡ ಜಿಲ್ಲಾ ವಾಲಿಬಾಲ್ ಪಂದ್ಯಾಟದ ವಿಜೇತರು, ಎಸ್.ಡಿ.ಎಂ.ಎಸ್ ದುಗ್ಗನಬೆಟ್ಟು ಬೆಳ್ಳಂಪಳ್ಳಿ (ಪ್ರಥಮ) ಶ್ರೀ ಮಹಾಮಾಯಿ ಫ್ರೆಂಡ್ಸ್ ಮಾಳ.ಬಿ (ದ್ವಿತೀಯ) ಶ್ರೀ ಮಹಾಮಾಯಿ ಫ್ರೆಂಡ್ಸ್ ಮಾಳ ಎ (ತೃತೀಯ) ಪುರುಷರ ಹಗ್ಗ ಜಗ್ಗಾಟ- ಶ್ರೀ ದುರ್ಗಾಪರಮೇಶ್ವರೀ ಬಚ್ಚಪ್ಪು (ಪ್ರಥಮ) ಸಂಗಮ ಫ್ರೆಂಡ್ಸ್ ಪಾಲ್ಜೆಡ್ಡು ಮುನಿಯಾಲು (ದ್ವಿತೀಯ) ಮಹಿಳೆಯರ ಹಗ್ಗಜಗ್ಗಾಟ- ಕೈರಬೆಟ್ಟು ಫ್ರೆಂಡ್ಸ್ (ಪ್ರಥಮ) ಸಂಗಮ್ ಫ್ರೆಂಡ್ಸ್, ಮುನಿಯಾಲು (ದ್ವಿತೀಯ)ತ್ರೋಬಾಲ್- ಮಾಳ ಫ್ರೆಂಡ್ಸ್ ,ಎ(ಪ್ರಥಮ) ಮಾಳ ಫ್ರೆಂಡ್ಸ್ ಬಿ (ದ್ವಿತೀಯ) ಹಾಗೂ ಅಥ್ಲೆಟಿಕ್ಸ್ ವಿಭಾಗದಲ್ಲಿ ವೈಯಕ್ತಿಕ ಪ್ರಶಸ್ತಿಯ ಜೊತೆಗೆ 18 ಮಂದಿಗೆ ವಿವಿಧ ವಿಭಾಗದಲ್ಲಿ ಚಾಂಪಿಯನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.