Share this news

ಕಾರ್ಕಳ:ಮಾಳ ಘಾಟಿಯ ಅಂಬಿದ ಗುಂಡಿ ತಿರುವಿನಲ್ಲಿ ಮಿನಿ ಈಚರ್ ಲಾರಿಯೊಂದು ಪಲ್ಟಿಯಾದ ಪರಿಣಾಮ ಚಾಲಕ‌ ಗಾಯಗೊಂಡ ಘಟನೆ ಸಂಭವಿಸಿದೆ.
ಭಾನುವಾರ ಮುಂಜಾನೆ 2 ಗಂಟೆ ಸುಮಾರಿಗೆ ಮಾಳ ಗ್ರಾಮದ ಮಾಳ ಘಾಟ್‌ನ ಅಂಬಿದ ಗುಂಡಿ ತಿರುವಿನಲ್ಲಿ ಹಾದು ಹೋಗುವ ಬಜಗೋಳಿ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದ್ದು,ಮಿನಿ ಲಾರಿ ಚಾಲಕ ಎಸ್.ಕೆ. ಬಾರ್ಡರ್ ಕಡೆಯಿಂದ ಬಜಗೋಳಿ ಕಡೆಗೆ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಹೋಗುವಾಗ ಲ ನಿಯಂತ್ರಣ ತಪ್ಪಿ ದ ಗೂಡ್ಸ್ ಈಚರ್ ವಾಹನ ಅಪಘಾತಕ್ಕೀಡಾಗಿ ವಾಹನದಲ್ಲಿದ್ದ ನಾಗಾರಾಜ್ ಮತ್ತು ಗೂಡ್ಸ್ ವಾಹನದ ಚಾಲಕನಿಗೆ ಗಾಯಗಳಾಗಿವೆ. ಈ ಅಪಘಾತದಿಂದ ಗೂಡ್ಸ್ ಈಚರ್ ವಾಹನ ಜಖಗೊಂಡಿದೆ.
ಈ ಕುರಿತು ಈ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

 

                        

                          

Leave a Reply

Your email address will not be published. Required fields are marked *