

ಕಾರ್ಕಳ: ತಾಲೂಕಿನ ಮಿಯ್ಯಾರಿನಲ್ಲಿ ಎಲೆಕ್ಟ್ರಿಕಲ್ ಸರ್ವಿಸ್ ಅಂಗಡಿಯಿಂದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವುಗೈದಿರುವ ಘಟನೆ ನಡೆದಿದೆ.
ಮಿಯ್ಯಾರು ಜೋಡುಕಟ್ಟೆ ಕೊಂಕಣ್ ಕಾಂಪ್ಲೆಕ್ಸ್ ನಲ್ಲಿ ರೋಹಿತ್ ಎಂಬವರಿಗೆ ಸೇರಿದ ಅನ್ನಪೂರ್ಣ ಎಲೆಕ್ಟ್ರಿಕಲ್ ಉಪಕರಣಗಳ ಸರ್ವಿಸ್ ಅಂಗಡಿಯಲ್ಲಿ ಕಳ್ಳತನ ನಡೆದಿದ್ದು, ಶುಕ್ರವಾರ ರಾತ್ರಿ ಅಂಗಡಿ ಕೋಣೆಯ ಶಟರ್ ಗೆ ಹಾಕಿದ ಬೀಗವನ್ನು ಮುರಿದ ಕಳ್ಳರು ರಿಪೇರಿಗೆ ಬಂದಿದ್ದ ಸುಮಾರು 85,000/- ರೂ ಮೌಲ್ಯದ ಹಳೆಯ ನೀರಿನ ಪಂಪುಗಳು,-14 ಸುಮಾರು 3000/- ರೂ ಮೌಲ್ಯದ 6 ಹಳೆಯ ಪ್ಯಾನಿನ ಕೋರುಗಳು, ಸುಮಾರು 3125/- ರೂ ಮೌಲ್ಯದ 2 ½ ಕೆ.ಜಿ ತೂಕದ ವಯರ್ಗಳು ಹಾಗೂ ಸುಮಾರು 8000/- ರೂ ಮೌಲ್ಯದ 02 ಇಂಡಸ್ಟ್ರಿಯಲ್ ಪಂಪುಗಳು ಸೇರಿದಂತೆ ಒಟ್ಟು 99125/- ರೂ ಮೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.
ಈ ಕುರಿತು ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



