

ಕಾರ್ಕಳ: ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ ಮಧುಮೇಹ ಹಾಗೂ ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಿಯ್ಯಾರಿನ ಮಲ್ಲಿಕಾ ಲೋಬೊ (43) ಮೃತಪಟ್ಟವರು.
ಜೂ.30 ರಂದು ಅನಾರೋಗ್ಯದಿಂದ ಮನೆಯಲ್ಲಿ ಮಲಗಿದ್ದ ಅವರು ಸಂಜೆಯ ವೇಳೆಗೆ ಅವರ ಮಗಳು ಎಬ್ಬಿಸಿದಾಗ ಮಾತನಾಡದೇ ಇದ್ದ ಕಾರಣ ಅವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಆ ವೇಳೆಗಾಗಲೇ ಮಲ್ಲಿಕಾ ಲೋಬೊ ಮೃತಪಟ್ಟಿದ್ದರು.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



