Share this news

ಕಾರ್ಕಳ, ಫೆ.25 : ನೂತನವಾಗಿ ನಿರ್ಮಾಣವಾಗಿರುವ ಡಾ| ಬಿ. ಆರ್ ಅಂಬೇಡ್ಕರ್ ಭವನ ಲೋಕಾರ್ಪಣೆ ಮತ್ತುಕಿಸಾನ್ ಸಭಾಭವನದ ಉದ್ಘಾಟನೆ ಹಾಗೂ ಇತರ ಕಾರ್ಯಕ್ರಮಗಳಿಗಾಗಿ ಕಾರ್ಕಳಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾರ್ಕಳ ಮಹಾ ಮಸ್ತಕಾಭಿಷೇಕ ಸೇರಿದಂತೆ ಕಾರ್ಕಳ ಕ್ಷೇತ್ರದ ವಿವಿಧ ಅಭಿವೃದ್ದಿ ಪ್ರಮುಖ ಯೋಜನೆಗಳಿಗೆ ಅನುದಾನ ಒದಗಿಸುವಂತೆ ಶಾಸಕ ವಿ ಸುನಿಲ್ ಕುಮಾರ್ ರವರು ಮನವಿ ಸಲ್ಲಿಸಿದರು.
ಪ್ರತೀ 12 ವರ್ಷಗಳಿಗೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ ಕಾರ್ಕಳಕ್ಕೆ ಆಗಮಿಸುವ ಲಕ್ಷಾಂತರ ಯಾತ್ರಿಕರು ಹಾಗೂ ಪ್ರವಾಸಿಗರಿಗೆ ಕಾರ್ಕಳ ಹಾಗೂ ಸುತ್ತಲಿನ ಪರಿಸರದಲ್ಲಿ ರಸ್ತೆ, ಕುಡಿಯುವ ನೀರು, ಶೌಚಾಲಯ ಮತ್ತು ಅಲಂಕಾರಿಕ ವಿದ್ಯುತ್ ದೀಪ ಒಳಗೊಂಡAತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮಕ್ಕೆರೂ.75.00 ಕೋಟಿ ಅನುದಾನವನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಪ್ರಸ್ತುತ ಕಾರ್ಕಳದ ಕೆಜಿಟಿಟಿಐ ತರಬೇತಿ ಕೇಂದ ್ರಹಾಗೂ ಸರಕಾರಿ ಬಿ.ಎಸ್ಸ್.ಸಿ ನರ್ಸಿಂಗ್ ಕಾಲೇಜುಗಳು ಸ್ವಂತ ಕಟ್ಟಡ ಇಲ್ಲದೆ ಹಲವು ವರ್ಷಗಳಿಂದ ತಾತ್ಕಾಲಿಕ ಕಟ್ಟಡಗಳಲ್ಲಿನಡೆಯುತ್ತಿದ್ದು, ಎರಡೂ ಕಾಲೇಜುಗಳಿಗೆ ಈಗಾಗಲೇ ಜಾಗ ಕಾಯ್ದಿರಿಸಲಾಗಿದ್ದು, ಹೊಸ ಸ್ವಂತ ಕಟ್ಟಡದ ತುರ್ತು ಅವಶ್ಯಕತೆ ಇರುತ್ತದೆ. ಈ ನಿಟ್ಟಿನಲ್ಲಿತಕ್ಷಣವೇ ಈ ಎರಡು ಸರಕಾರಿವಿದ್ಯಾ ಸಂಸ್ಥೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಅನುದಾನ ಬಿಡುಗಡೆ ಮಾಡುವಂತೆ ಕೋರಿ ಮನವಿ ಸಲ್ಲಿಸಿದರು.
ಹೆಬ್ರಿ ತಾಲೂಕು ಕೇಂದ್ರವಾಗಿ ಹಲವು ವರ್ಷಗಳಾದರೂ ಸಾಕಷ್ಟು ಜನಸಂಖ್ಯೆ, ಹಿಂದುಳಿದ ಬುಡಕಟ್ಟು ಸಮುದಾಯದವರು ಹೆಚ್ಚಾಗಿ ವಾಸವಾಗಿದ್ದು, ಆ ಭಾಗದ ಜನರ ಆರೋಗ್ಯದ ಹಿತದೃಷ್ಠಿಯಿಂದ ಹೆಬ್ರಿ ಸಮುದಾಯ ಆರೋಗ್ಯಕೇಂದ್ರವನ್ನು 100 ಹಾಸಿಗೆಗಳ ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೆರಿಸುವ ಕುರಿತು ಮನವಿ ಮಾಡಿದರು.
ಬಿಆರ್ ಅಂಬೇಡ್ಕರ್ ಭವನವು ರೂ.06.00 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದ್ದು ಸಾರ್ವಜನಿಕ ಬಳಕೆಹಾಗೂ ಸಮುದಾಯದ ಜನರ Àಕಾರ್ಯಕ್ರಮಗಳಿಗಾಗಿ ಅಗತ್ಯವಿರುವ ಕೆಲವು ಮೂಲಭೂತ ಸೌಕರ್ಯಗಳಾದ ಕುಡಿಯುವನೀರಿನವ್ಯವಸ್ಥೆ, ಪೀಠೋಪಕರಣಗಳು, ಹಾಗೂ ಅಡುಗೆ ಪರಿಕರಗಳು ಸೇರಿದಂತೆ ಇನ್ನಿತರ ಅಭಿವೃದ್ದಿ ಕಾಮಗಾರಿಗಳಿಗೆ ಕನಿಷ್ಟ ರೂ.03.00 ಕೋಟಿಅನುದಾನವನ್ನು ಹಾಗೂ ಹೆಬ್ರಿ ತಾಲೂಕು ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಸರಕಾರದಿಂದ ಈಗಾಗಲೇ 1 ಕೋಟಿ ಅನುದಾನವನ್ನು ಬಿಡುಗಡೆಮಾಡಲಾಗಿದ್ದು,ಇದರಿಂz ಅಂಬೇಡ್ಕರ್ ಭವನ ನಿರ್ಮಾಣವು ಕಷ್ಟಸಾಧ್ಯವಾಗಿರುತ್ತದೆ. ಈ ಭಾಗದ ದಲಿತ ಸಮುದಾಯವರ ಬೇಡಿಕೆಯಂತೆ 2 ಕೋಟಿ ಹೆಚ್ಚುವರಿ ಅನುದಾನವನ್ನು ಬಿಡುಗಡೆಮಾಡುವಂತೆ ಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪ, ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮೀಣ ಪ್ರದೇಶದ ಯುವ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಹಿಂದಿನ ಬಿಜೆಪಿ ಸರ್ಕಾರದ ತೀರ್ಮಾನದಂತೆ ಶಿಗ್ಗಾವಿ ಜವಳಿ ಪಾರ್ಕ್ ಮಾದರಿಯಲ್ಲಿ ನೇರವಾಗಿ ಸಂಪೂರ್ಣ ಸರಕಾರದ ಅನುದಾನದಲ್ಲಿಯೇ ಕಾರ್ಕಳದ ನಿಟ್ಟೆ ಜವಳಿ ಪಾರ್ಕ್ ಅನ್ನು ಸರಕಾರದಿಂದಲೇ ಅಭಿವೃದ್ಧಿಪಡಿಸಿ,ಆದಷ್ಟೂಶೀಘ್ರವಾಗಿ ಈ ಯೋಜನೆಯನ್ನುಅನುಷ್ಠಾನಗೊಳಿಸುವ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಜೊತೆಗೆ ಕರಾವಳಿಭಾಗದ ಬಹುಮುಖ್ಯಸಮಸ್ಯೆಕೆಂಪುಕಲ್ಲು, ಮರಳುಸಾಗಾಟ ಹಾಗೂ 9&11ಎ ಖಾತಾಸಮಸ್ಯೆ, ಪ್ರಾಧಿಕಾರದಅನುಮೋದನೆ ಸಮಸ್ಯೆ ಸೇರಿದಂತೆ ಸರಕಾರಿ ನಿಯಮಗಳನ್ನು ಸರಳೀಕರಣಗೊಳಿಸುವಂತೆ ಮನವಿ ಮಾಡಿದರು.

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

 

.

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *