Share this news

ಕಾರ್ಕಳ : ಕಾಂಗ್ರೆಸ್ ಹಿರಿಯ ಮುಖಂಡ,ಬಿಲ್ಲವ ಸಮಾಜದ ಮುಂದಾಳು ಡಿ.ಆರ್ ರಾಜು ನಿಧನಕ್ಕೆ ಶಾಸಕ ಸುನಿಲ್ ಕುಮಾರ್ ಸಂತಾಪ ಸೂಚಿಸಿದ್ದಾರೆ.

ನೇರ ನಡೆ–ನುಡಿಯ, ಸರಳ ಸಜ್ಜನಿಕೆಯ ವ್ಯಕ್ತಿ, ಅಜಾತಶತ್ರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಹಿಂದುಳಿದ ವರ್ಗ ಘಟಕದ ರಾಜ್ಯ ಉಪಾಧ್ಯಕ್ಷರು, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷರು, ವಿವಿಧ ಸಂಘ ಸಂಸ್ಥೆಗಳಲ್ಲಿ ಅಹರ್ನಿಶಿ ದುಡಿದ ಶ್ರಮಜೀವಿ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನ ಸುದೀರ್ಘ ಸೇವೆಯನ್ನು ಮುಡಿಪಾಗಿಟ್ಟ ಡಿ. ಆರ್ ರಾಜು ಅವರ ಅಗಲುವಿಕೆ ತೀವೃ ನೋವನ್ನುಂಟುಮಾಡಿದೆ.

ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಸಾರ್ವಜನಿಕ ಸೇವೆಯಲ್ಲಿ ಅವರ ಸುದೀರ್ಘ ಸೇವೆ ಮತ್ತು ಬಡವರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳಿಗಾಗಿ ಅವರನ್ನು ಸ್ಮರಿಸಬೇಕಿದೆ. ಸರಳತೆ, ಮೃದು ಹೃದಯಿಯಾಗಿದ್ದ ಅವರ ಅಗಲುವಿಕೆ ಸಮಾಜಕ್ಕೂ ಅತಿ ದೊಡ್ಡ ನಷ್ಟ.

ಜೀವಿತಾವಧಿಯಲ್ಲಿ ತಮ್ಮದೆ ಆದ ವಿಶಿಷ್ಟ ಪರಿಶುದ್ಧ ವ್ಯಕ್ತಿತ್ವದ ಮೂಲಕ ಬದುಕಿನುದ್ದಕ್ಕೂ ತಾನು ನಂಬಿದ ಮನುಷ್ಯಪರ ತತ್ವ, ಸಿದ್ಧಾಂತಗಳನ್ನು ಸದ್ದಿಲ್ಲದೆ ನಡೆಸಿಕೊಂಡು ಬಂದ ಅಪರೂಪದ ಮುತ್ಸದ್ದಿ. ಸ್ನೇಹಜೀವಿಯಾಗಿ ಸ್ವಪ್ರಯತ್ನದಿಂದ ರಾಜಕಾರಣ ಸಹಿತ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು, ಒಂದೊಂದೇ ಮೆಟ್ಟಿಲೇರಿ ಒಂದು ಸಣ್ಣ ಕಪ್ಪು ಚುಕ್ಕೆಯೂ ಇಲ್ಲದಂತೆ ನಿಷ್ಠುರವಾಗಿ ತಮ್ಮ ಬದುಕನ್ನು ಸವೆಸಿದ ಧೀಂಮಂತರು.ಈ ದುಃಖದ ಸಮಯದಲ್ಲಿ ನಿಮ್ಮ ಅಗಲುವಿಕೆ ಸಹಿಸುವ ಶಕ್ತಿಯನ್ನು ಭಗವಂತ ದು:ಖತಪ್ತ ಅವರ ಕುಟುಂಬಕ್ಕೆ ಕರುಣಿಸಲಿ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *