ಕಾರ್ಕಳ: ಆರೆಸ್ಸೆಸ್ ಹಿರಿಯ ಮುಖಂಡ, ಶಿಕ್ಷಕರು ಹಾಗೂ ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ತಂದೆ ಎಂ.ಕೆ ವಾಸುದೇವ ಅವರು ಇಂದು ಮುಂಜಾನೆ ಉಡುಪಿಯ ಟಿಎಂಎ ಪೈ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಬಿಜೆಪಿ ಹಿರಿಯ ಮುಖಂಡ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ಸೇರಿದಂತೆ ಹಲವಾರು ಗಣ್ಯರು ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದರು.
ಎಂ. ಕೆ ವಾಸುದೇವ ಅವರ ನಿಧನದ ಸುದ್ಧಿ ತಿಳಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ,ಬ್ರಿಜೇಶ್ ಚೌಟ, ಆರೆಸ್ಸೆಸ್ ಹಿರಿಯ ಪ್ರಚಾರಕ ದಾ.ಮಾ ರವಿ, ಸಹ ಪ್ರಾಂತ ಪ್ರಚಾಕರ್ ನಂದೀಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ,ಕಿಶೋರ್ ಬೊಟ್ಯಾಡಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಹರತಾಳು ಹಾಲಪ್ಪ, ನಳಿನ್ ಕುಮಾರ್ ಕಟೀಲ್, ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಮೋಹನ ಆಳ್ವ,ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಡಾ.ಸುಧಾಕರ ಶೆಟ್ಟಿ,ಸಾಣೂರು ರಾಜೇಶ್ವರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ, ಮುಂಬಯಿ ಉದ್ಯಮಿ ಶಿವರಾಮ ಶೆಟ್ಟಿ ಅಜೆಕಾರು, ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಅರಗ ಜ್ಞಾನೇಂದ್ರ,ಕಿರಣ್ ಕೊಡ್ಗಿ, ಕಾಂಗ್ರೆಸ್ ಮುಖಂಡ ಶೇಖರ ಮಡಿವಾಳ ಮತ್ತಿತರರು ಪಾರ್ಥೀವಶರೀರದ ಅಂತಿಮ ದರ್ಶನ ಪಡೆದರು.