
ಟೆಹ್ರಾನ್, ಮಾ.9: ಅಮೆರಿಕ ಮತ್ತು ಇಸ್ರೇಲ್ ಜಂಟೀ ವೈಮಾನಿಕ ದಾಳಿ ನಡೆಸಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮನೈಯವರನ್ನು ಹತ್ಯೆಗೈದ ಬಳಿಕ ಇಡೀ ಇರಾನ್ ನಲ್ಲಿ ಲಕ್ಷಾಂತರ ಮಹಿಳೆಯರು ಹಾಗೂ ನಾಗರಿಕರು ಖಮನೈ ಸಾವನ್ನು ಸಂಭ್ರಮಿಸಿದ್ದರು.ಇದೀಗ ಖಮನೈ ಹತ್ಯೆಯಾಗಿ ಎರಡು ವಾರಗಳು ಆಗುತ್ತಿದ್ದಂತೆಯೇ ಅವರ ಪುತ್ರ ಮೊಜ್ತಬಾ ಖಮನೈ ಅವರನ್ನು ಇರಾನ್‌ನ ನೂತನ ಸರ್ವೋಚ್ಚ ನಾಯಕ ಎಂದು ಘೋಷಿಸಲಾಗಿದೆ. ಆದರೆ ಖಮನೈ ಪತ್ರನ ವಂಶಪಾರAಪರ್ಯ ನೇಮಕವನ್ನು ವಿರೋಧಿಸಿ ಇರಾನ್‌ನ ಮಹಿಳೆಯರು ಮತ್ತು ನಾಗರಿಕರು ಬೀದಿಗಿಳಿದು ಭಾರಿ ಪ್ರತಿಭಟನೆ ನಡೆಸುತ್ತಿದ್ದಾರೆ.
1979ರ ಇಸ್ಲಾಮಿಕ್ ಕ್ರಾಂತಿಯ ನಂತರ ಇರಾನ್‌ನಲ್ಲಿ ಸರ್ವೋಚ್ಚ ನಾಯಕನ ಹುದ್ದೆಯು ತಂದೆಯಿAದ ಮಗನಿಗೆ ಹಸ್ತಾಂತರವಾಗುತ್ತಿರುವುದು ಇದೇ ಮೊದಲು. ಇದನ್ನು ರಾಜಪ್ರಭುತ್ವದ ಮರುಸ್ಥಾಪನೆ ಎಂದು ಕರೆದಿರುವ ಪ್ರತಿಭಟನಾಕಾರರು ಈ ನೇಮಕವನ್ನು ಉಗ್ರವಾಗಿ ವಿರೋಧಿಸುತ್ತಿದ್ದಾರೆ. ಟೆಹ್ರಾನ್‌ನ ಬೀದಿಗಳಲ್ಲಿ ಮತ್ತು ಮನೆಗಳ ಕಿಟಕಿಗಳಿಂದ “ಡೆತ್ ಟು ಮೊಜ್ತಬಾ” (ಮೊಜ್ತಬಾಗೆ ಸಾವು) ಎಂಬ ಘೋಷಣೆಗಳನ್ನು ಕೂಗುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋಗಳಲ್ಲಿ, ಮಹಿಳೆಯರು ತಮ್ಮ ಹಿಜಾಬ್ ಹಾಗೂ ಬುರ್ಖಾವನ್ನು ಗಾಳಿಯಲ್ಲಿ ಬೀಸುತ್ತಾ ಮತ್ತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಧೈರ್ಯದಿಂದ ಪ್ರತಿಭಟಿಸುತ್ತಿರುವುದು ಕಂಡುಬAದಿದೆ. 2022ರ ಮಹ್ಸಾ ಅಮಿನಿ ಸಾವಿನ ನಂತರ ಆರಂಭವಾಗಿದ್ದ ಪ್ರತಿಭಟನೆಯ ಕಾವು, ಈಗ ಮೊಜ್ತಬಾ ನೇಮಕದಿಂದಾಗಿ ಮತ್ತೆ ಸ್ಫೋಟಗೊಂಡಿದೆ.
ಇರಾನ್‌ನ ಈ ನೇಮಕವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿಹಾಕಿದ್ದಾರೆ.ಆತನ ನೇಮಕದ ವಿರುದ್ಧ ಇರಾನ್ ಜನತೆ ತಿರುಗಿಬಿದ್ದಿದ್ದು ಈ ಸ್ಥಾನದಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಕಾವೇರಿಸಿದೆ.
ಪ್ರತಿಭಟನೆಯನ್ನು ಹತ್ತಿಕ್ಕಲು ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ನಗರದಾದ್ಯಂತ ಬೀಡುಬಿಟ್ಟಿದೆ. ಟೆಹ್ರಾನ್‌ನ ಎಕ್ಬಾಟನ್ ಸೇರಿದಂತೆ ಹಲವು ಭಾಗಗಳಲ್ಲಿ ಪ್ರತಿಭಟನಾಕಾರರ ಮೇಲೆ ಕಠಿಣ ಕ್ರಮ ಜರುಗಿಸಲಾಗುತ್ತಿದೆ ಎಂಬ ವರದಿಗಳು ಲಭ್ಯವಾಗಿವೆ.


.
.
.
.
.
.
.
.
.
.
