ಮಂಗಳೂರು: ರಾಜ್ಯದಲ್ಲಿ ಮುಸ್ಲಿಂ ಮಕ್ಕಳಿಗೆ ಧರ್ಮ ಶಿಕ್ಷಣ ಪ್ರಸಾರ ಮಾಡುವ ಮದರಸಾಗಳೇ ಭಯೋತ್ಪಾದಕರ ಅಡಗು ತಾಣಗಳಾಗಿವೆ ಎಂದು ಹಿಂದೂ ಮುಖಂಡ ಶರಣ್ ಪಂಪ್’ವೆಲ್ ಆರೋಪಿಸಿದ್ದಾರೆ.
ಮದರಾಸಗಳಲ್ಲಿ ಭಯೋತ್ಪಾದಕರಿಗೆ ಮೌಲ್ವಿಗಳು ಆಸರೆ ನೀಡುತ್ತಿದ್ದಾರೆ, ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಮಸೀದಿ ಹಾಗೂ ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಕುಂದಲಹಳ್ಳಿಯಲ್ಲಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರನನ್ನು ಬಂಧಿಸಬೇಕಾದರೆ ರಾಷ್ಟ್ರೀಯ ತನಿಖಾ ದಳದ ಪೊಲೀಸರು ರಾಜ್ಯದಲ್ಲಿರುವ ಎಲ್ಲಾ ಮದರಸಾಗಳನ್ನು ಶೋಧನೆ ಮಾಡಬೇಕು. ಯಾಕೆಂದರೆ, ಮದರಸಾಗಳೇ ಭಯೋತ್ಪಾದಕರ ಅಡಗುತಾಣವಾಗಿದೆ. ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ. ಬಾಂಬರ್ ಮಸೀದಿಗೆ ಹೋಗಿ ನಮಾಜ್ ಮಾಡಿ ಬಟ್ಟೆ ಬದಲಿಸಿದ್ದಾನೆ ಎಂದು ಆರೋಪಿಸಿದ್ದಾರೆ.
ರಾಮೇಶ್ವರಂ ಕೆಫೆ ಬಾಂಬರ್ ಬಳ್ಳಾರಿಯಲ್ಲಿ ಓಡಾಟ ಮಾಡಿದ್ದಾನೆ. ನಂತರ, ಭಟ್ಕಳಕ್ಕೆ ಬಂದಿದ್ದಾನೆ ಅನ್ನೋ ಮಾಹಿತಿಯನ್ನು ಎನ್‌ಐಎ ನೀಡಿದ್ದಾರೆ. ಎನ್ ಐ ಎ ಪೊಲೀಸ್ ನವರು ಕರ್ನಾಟಕದಲ್ಲಿರುವ ಮದರಸ ಮಸೀದಿ ಮೇಲೆ ದಾಳಿ ಮಾಡಿ ತನಿಖೆ ಮಾಡಬೇಕು. ಇನ್ನು ಬಾಂಬರ್ ಭಟ್ಕಳದಲ್ಲಿದ್ದಾನೆ ಎಂದು ಮಾಹಿತಿ ಬಂದಿದೆ. ಹೀಗಾಗಿ, ಭಟ್ಕಳದಲ್ಲಿರುವ ಎಲ್ಲಾ ಮಸೀದಿಗಳು ಹಾಗೂ ಮದರಸಗಳ ಮೇಲೆ ದಾಳಿ ಮಾಡಿದರೆ, ಶೇ.100ಕ್ಕೆ 100ರಷ್ಟು ಬಾಂಬರ್ ಎಲ್ಲಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ ಎಂದು ತಿಳಿಸಿದರು.
ಇನ್ನು ರಾಜ್ಯದ ಮದರಸಗಳು ಭಯೋತ್ಪಾದಕರ ತಾಣವಾಗುತ್ತಿದೆ. ಭಯೋತ್ಪಾದಕರಿಗೆ ಶಿಕ್ಷಣ ನೀಡುವ ಕೆಲಸವನ್ನ ಕರ್ನಾಟಕದ ಕೆಲವು ಮದರಸಗಳು ಮಾಡುತ್ತಿದೆ. ಅಲ್ಲಿದ್ದಂತಹ ಮೌಲ್ವಿಗಳು ಮಾಡುತ್ತಿದ್ದಾರೆ. ಎನ್‌ಐಎ ಹಾಗೂ ಪೊಲೀಸ್ ಇಲಾಖೆಗೆ ಬಲವಾಗಿ ಆಗ್ರಹ ಮಾಡುತ್ತೇನೆ. ತಾವು ಕರ್ನಾಟಕದಲ್ಲಿರುವ ಎಲ್ಲಾ ಮಸೀದಿಗಳು ಹಾಗೂ ಮದರಸಾಗಳ ಮೇಲೆ ದಾಳಿ ಮಾಡಿದರೆ, ರಾಮೇಶ್ವರಂ ಕೆಫೆಯ ಮೇಲೆ ಬಾಂಬ್ ಹಾಕಿದ ಆರೋಪಿ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್‌ವೆಲ್ ಹೇಳಿದ್ದಾರೆ.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.