ಅಜೆಕಾರು: ಹೆಬ್ರಿ ತಾಲೂಕಿನ ವರಂಗ ಗ್ರಾಮದ ಮುನಿಯಾಲು ಸಮೀಪದ ಚಟ್ಕಲ್’ಪಾದೆ ಎಂಬಲ್ಲಿ ಬುಧವಾರ ಬೆಳಗ್ಗೆ ಬೀಸಿದ ಭಾರೀ ಬಿರುಗಾಳಿಗೆ ವಿದ್ಯುತ್ ಲೈನ್ ಮೇಲೆ ಮರಗಳು ಬಿದ್ದ ಪರಿಣಾಮ 10 ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿಯ ಬದಿಯಲ್ಲಿನ 11 ಕೆವಿ ವಿದ್ಯುತ್ ಲೈನ್ ಸಂಪೂರ್ಣ ನೆಲಕಚ್ಚಿದ್ದು, ಮುನಿಯಾಲು ಪಡುಕುಡೂರು ಸಂಪರ್ಕ ರಸ್ತೆಯ ಸಂಚಾರ ಸ್ಥಗಿತಗೊಂಡಿದೆ.
ಈಗಾಗಲೇ ಮೆಸ್ಕಾಂ ಸಿಬ್ಬಂದಿಗಳು, ಸ್ಥಳೀಯರ ಸಹಕಾರ ಪಡೆದು ಸಮಾರೋಪಾದಿಯಲ್ಲಿ ದುರಸ್ತಿ ಕಾರ್ಯಕ್ಕೆ ಮುಂದಾಗಿದ್ದು, ಮುನಿಯಾಲು ಸುತ್ತಮುತ್ತಲಿನ ಪರಿಸರದಲ್ಲಿ ಇಂದು ಸಂಜೆ 6 ಗಂಟೆ ವರೆಗೆ ವಿದ್ಯುತ್ ಪೂರೈಕೆ ಸ್ಥಗಿತವಾಗಲಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

`