Share this news

ಬೆಂಗಳೂರು: ಸಿಎಂ ಕೇವಲ ರೈತರಿಗೆ ವಕ್ಫ್ ನೀಡಿರುವ ನೋಟಿಸ್ ವಾಪಸ್ ಪಡೆದರೆ ಸಮಸ್ಯೆ ಬಗೆಹರಿಯಲ್ಲ.ರಾಜ್ಯದಲ್ಲಿ 50,000 ಎಕರೆಗೂ ಹೆಚ್ಚು ರೈತರ ಭೂಮಿಯನ್ನು ವಕ್ಫ್ ಬೋರ್ಡ್ ಅಕ್ರಮವಾಗಿ ವಶಪಡಿಸಿಕೊಂಡಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಭೂಮಿಯನ್ನ ಯಾವಾಗ ವಕ್ಫ್ ಗೆ ಮಾಡಿಕೊಡುತ್ತೆ ಎಂದು ಹೇಳಲಾಗಲ್ಲ. ಈ ವಿಚಾರವನ್ನು ಜಂಟಿ ಸಂಸದೀಯ ಅಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಹುಬ್ಬಳ್ಳಿ, ಬೆಂಗಳೂರಿಗೆ ಬಂದು ರೈತರ ಮನವಿ ಸ್ವೀಕರಿಸಲು ಜೆಪಿಸಿ ಅಧ್ಯಕ್ಷೆ ಜಗದಾಂಬಿಕಾ ಪಾಲ್ ಅವರಿಗೆ ಮನವಿ ಮಾಡಿದ್ದೇನೆ. ನ. 6, 7ರಂದು ಎರಡು ದಿನ ರಾಜ್ಯ ಪ್ರವಾಸ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಸಿಎಂ ಸೂಚನೆ ಮೇರೆಗೆ ವಕ್ಫ್ ಸಚಿವ ಜಮೀರ್ ಅಹಮದ್ ಜಿಲ್ಲೆಗಳಿಗೆ ವಕ್ಫ್ ಅದಾಲತ್ ಮಾಡುತ್ತಿದ್ದಾರೆ. ವಕ್ಪ್ ಅದಾಲತ್ ಯಾವ ಕಾನೂನಿನ ಕೆಳಗೆ ಬಂದಿದೆ? ಅದಕ್ಕೆ ಯಾವ ಕಾನೂನಿನ ಮಾನ್ಯತೆ ಇದೆ? ಸಂವಿಧಾನದ ಯಾವ ವಿಧಿಯ ಕೆಳಗೆ ಅದಾಲತ್ ನಡೆಸಬಹುದು? ವಕ್ಫ್ ಅದಾಲತ್ ಕಾಂಗ್ರೆಸ್ ಪಕ್ಷದ ಅಸಾಂವಿಧಾನಿಕ ಅನ್ವೇಷಣೆ. ವಕ್ಪ್ ಅದಾಲತ್ ನಿಲ್ಲಿಸುವವರೆಗೆ ಕೂಡ ಬಿಜೆಪಿ ಹೋರಾಟ ನಡೆಯುತ್ತದೆ ಎಂದಿದ್ದಾರೆ.

ಕಾAಗ್ರೆಸ್ ನವರು ಉಚಿತ ಬಸ್ ಕೊಡುತ್ತಾರೆ, 2000 ರೂ. ಹಣ ಕೊಡುತ್ತಾರೆ ಅಂತಾ ಅವರಿಗೆ ವೋಟ್ ಹಾಕಿದರೆ ನಮ್ಮ ದೇವಸ್ಥಾನ, ಮನೆ, ಮಠ ಎಲ್ಲಾ ತೆಗೆದುಕೊಂಡು ಹೋಗಿ ಸಾಬರಿಗೆ ಕೊಟ್ಟು ಬಿಡುತ್ತಾರೆ. ಹೀಗೆ ಕಾಂಗ್ರೆಸ್ ಗೆ ವೋಟ್ ಹಾಕುತ್ತಲೇ ಇದ್ದರೆ ಉಚಿತ ಬಸ್ ಇರಲ್ಲ, ಧರ್ಮಸ್ಥಳ, ಶೃಂಗೇರಿ ದೇವಸ್ಥಾನಗಳೂ ಇರಲ್ಲ ಎಂದಿದ್ದಾರೆ.

ಕೇAದ್ರ ಸರ್ಕಾರ ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಜೆಪಿಸಿ ಮಾಡಿದೆ. ಈಜಿಪ್ಟ್, ಸಿಂಗಾಪುರದಲ್ಲಿ ಈಗಾಗಲೇ ವಕ್ಪ್ ನಿಷೇಧ ಮಾಡಿದ್ದಾರೆ. ನಾವ್ಯಾರೂ ವಕ್ಪ್ ಬ್ಯಾನ್ ಮಾಡಿ ಎಂದು ಹೇಳುತ್ತಿಲ್ಲ, ಅವರ ಜಮೀನೂ ಕೇಳುತ್ತಿಲ್ಲ. ನಿಮಗೆ ನ್ಯಾಯಯುತವಾಗಿರುವುದನ್ನು ಇಟ್ಟುಕೊಳ್ಳಿ, ನಮ್ಮ ಜಾಗಕ್ಕೆ ಬರಬೇಡಿ ಎಂದಷ್ಟೇ ನಾವು ಹೇಳುವುದು ಎಂದಿದ್ದಾರೆ.

ಈ ಮಧ್ಯೆ ತೇಜಸ್ವಿ ಸೂರ್ಯ ಅವರು ಹೈ ಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರೆ ಎನ್ನಲಾಗಿದೆ. ಸೋಮವಾರ ತೇಜಸ್ವಿ ಸೂರ್ಯ ರಿಟ್ ಅರ್ಜಿ ಸಲ್ಲಿಸಲಿದ್ದಾರೆ. ವಕ್ಫ್ ಕಾಯ್ದೆ ತಿದ್ದುಪಡಿ ಕುರಿತ ಜೆಪಿಸಿ ಸದಸ್ಯರಾಗಿರುವ ತೇಜಸ್ವಿ ಸೂರ್ಯ ಅವರು ರೈತರ ಪಹಣಿಯಲ್ಲಿ ವಕ್ಫ್ ಎಂದು ನೋಂದಣಿ ಮಾಡಿರುವುದು ಹಾಗೂ ನಾವು ರೈತರಿಗೆ ನೋಟಿಸ್ ನೀಡಿರುವ ವಿಚಾರವಾಗಿ ರಿಟ್ ಅರ್ಜಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ.

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

 

Leave a Reply

Your email address will not be published. Required fields are marked *