ಇಸ್ಲಾಮಾಬಾದ್: ಪಾಕಿಸ್ಥಾನದಲ್ಲಿ ಭಾರತಕ್ಕೆ ಬೇಕಾಗಿದ್ದ ನಟೋರಿಯಸ್ ಉಗ್ರರನ್ನು ಅಪರಿಚಿತರು ಸರಣಿ ಹತ್ಯೆಗೈಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಬ್ಬ ಮೋಸ್ಟ್ ವಾಂಟೆಂಡ್ ಉಗ್ರ ಶೇಖ್ ಜಮೀಲ್ ಉರ್ ರೆಹಮಾನ್ ಹತ್ಯೆಗೀಡಾಗಿದ್ದಾನೆ.ಪಾಕಿಸ್ತಾನದ ಖೈಬರ್’ಪುಂಗ್ವಾದ ಅಬೋಟಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಭಾರತದಲ್ಲಿ ಹಲವು ವಿಧ್ವಂಸಕ ಕೃತ್ಯಗಳನ್ನು ಎಸಗಿದ ಉಗ್ರರು ಪಾಕಿಸ್ಥಾನದಲ್ಲಿ ನಿಗೂಢವಾಗಿ ಹತ್ಯೆಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, 18 ಮಂದಿ ಮೋಸ್ಟ್ ವಾಂಟೆಂಡ್ ಉಗ್ರರು ಅಪರಿಚಿತರ ಗುಂಡಿಗೆ ಬಲಿಯಾಗಿ ದ್ದಾರೆ. ಉಗ್ರ ರೆಹಮಾನ್ ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವು ಉಗ್ರ ಕೃತ್ಯಗಳನ್ನು ಎಸಗಿದ್ದ ಕಾಶ್ಮೀರವನ್ನು ಪಾಕಿಸ್ಥಾನಕ್ಕೆ ಸೇರ್ಪಡೆ ಮಾಡುವ ಹೋರಾಟ ಹಾಗೂ ಜಗತ್ತಿನಾದ್ಯಂತ ಇಸ್ಲಾಂ ಧರ್ಮ ಹರಡುವುದಕ್ಕಾಗಿ ತೆಹ್ರೀಕ್ ಉಲ್ ಮುಜಾಹಿದ್ದೀನ್ ಎಂಬ ಸಂಘಟನೆನ್ನು ಸ್ಥಾಪಿಸಿದ್ದ
ಉಗ್ರ ಶೇಖ್ ಜಮೀಲ್ ಉರ್ ರೆಹಮಾನ್ ಕಾಶ್ಮೀರದಲ್ಲಿರುವ ವಿದ್ಯಾರ್ಥಿ ಗಳು ಮತ್ತು ಯುವಕರ ಮನವೊಲಿಸಿ, ಅವರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿ ಸೇನಾಪಡೆಗಳ ಮೇಲೆ ದಾಳಿ ನಡೆಸುವಂತೆ ಮಾಡುತ್ತಿದ್ದ ಈತ ಬಾಂಗ್ಲಾ ಸೌದಿ ಅರೇಬಿಯಾ, ಬ್ರಿಟನ್, ಗಲ್ಫ್ ದೇಶಗಳಿಂದ ಇಸ್ಲಾಂ ಪ್ರಚಾರಕ್ಕೆಂದು ಹಣ ಸಂಗ್ರಹಣೆ ಮಾಡಿ ಅದನ್ನು ಉಗ್ರ ಕೃತ್ಯಗಳಿಗೆ ಬಳಕೆ ಮಾಡುತ್ತಿದ್ದ.
ಭಾರತದ ವಿರುದ್ಧ ಭಯೋತ್ಪಾದಕ ದಾಳಿ ಮಾಡುವ ಪಾತಕಿಗಳ ಹತ್ಯೆ ನಡೆಯುತ್ತಿರುವುದು ಭಾರತದ ಪಾಲಿಗೆ ಉತ್ತಮ ಬೆಳವಣಿಗೆಯಾಗಿದೆ.