ಮೈಸೂರು: ಮುಡಾ ಅಕ್ರಮ ಹಗರಣ ಎಫ್‌ಐಆರ್ ನಲ್ಲಿ 2ನೇ ಆರೋಪಿಯಾಗಿರುವ ಬಿ.ಎಂ.ಪಾರ್ವತಿ ಲೋಕಾಯುಕ್ತ ನೋಟಿಸ್ ಹಿನ್ನೆಲೆ ಇಂದು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಬೆಳಗ್ಗೆ 10 ಗಂಟೆಯಿAದ ಲೋಕಾಯುಕ್ತ ಕಚೇರಿಯಲ್ಲಿ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ವಿಚಾರಣೆಗೆ ಹಾಜರಾಗಿದ್ದು, ಸುಮಾರು 3 ಗಂಟೆ ಕಾಲ ಹೇಳಿಕೆ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.
ಇನ್ನು ಮುಡಾ ಪ್ರಕರಣ ವಿಚಾರವಾಗಿ ಈಗಾಗಲೇ ಎ3 ಮಲ್ಲಿಕಾರ್ಜುನಸ್ವಾಮಿ, ಎ4 ದೇವರಾಜು ಕರೆಸಿ ಮೈಸೂರು ಲೋಕಾಯುಕ್ತ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆದರೆ ಂ1 ಸಿಎಂ ಸಿದ್ದರಾಮಯ್ಯ ವಿಚಾರಣೆ ಮಾತ್ರ ಬಾಕಿ ಇದೆ.
ಅಕ್ಟೋಬರ್ 18 – 19ರಂದು ಎರಡು ದಿನ ಕೇಂದ್ರದ ಜಾರಿನಿರ್ದೇಶನಾಲಯ ನಡೆಸಿದ್ದ ದಾಳಿಯಲ್ಲಿ ಹಲವಾರು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಿಯವರ ಹೆಸರಿನ ಜಮೀನನ್ನು ದೇವನೂರು ಬಡಾವಣೆ ನಿರ್ಮಿಸಲು ಮುಡಾ ವಶಪಡಿಸಿಕೊಂಡಿದ್ದರೂ ಆ ಭೂಮಿ ಇನ್ನೂ ಪಾರ್ವತಿಯವರ ಹೆಸರಿನಲ್ಲೇ ಇರುವುದು ಅದರಲ್ಲಿ ಪ್ರಮುಖ ದಾಖಲೆಯಾಗಿತ್ತು.