Share this news

ಬೆಂಗಳೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ನಡೆದಿದೆ ಎನ್ನಲಾಗಿರುವ ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಆರೋಪ ಕೇಳಿಬಂದಿದ್ದು, ಸಿಎಂ ಸಿದ್ದರಾಮಯ್ಯ ,ಅವರ ಪತ್ನಿ ಪಾರ್ವತಿ, ಭಾಮೈದ ಸೇರಿದಂತೆ ಹಲವರ ವಿರುದ್ಧ ಈಗಾಗಲೇ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ಕೂಡ ದಾಖಲಿಸಿದ್ದಾರೆ.
ಇತ್ತ ಸಿಎಂ ಸಿದ್ದರಾಮಯ್ಯ ವಿರುದ್ಧ FIR ದಾಖಲಾದ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್, ಸಚಿವರು ಹಾಗೂ ಶಾಸಕರು ಮತ್ತು ಕಾರ್ಯಕರ್ತರು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದರು. ವಿಪಕ್ಷಗಳ ಪ್ರತಿಭಟನೆ ಹಾಗೂ ಮುಡಾ ಸೈಟ್ ಹಂಚಿಕೆ ವಿವಾದದ ಗಂಭೀರತೆಯನ್ನು ಸಿಎಂ‌ ಅರಿತುಕೊಂಡಿಲ್ಲ ಎನ್ನುವ ವಿಚಾರದಲ್ಲಿ ಸ್ವತಃ ಸಂಪುಟದ ಕೆಲವು ಸಚಿವರು ಲ ಸಿಎಂ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿಗಳ ವಿರುದ್ಧ ದೂರುದಾರರು ದಾಖಲೆ ಸಂಗ್ರಹಿಸಲು ಮುಂದಾದ ತಕ್ಷಣವೇ ಈ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ಎಚ್ಚೆತ್ತುಕೊಳ್ಳಬೇಕಿತ್ತು. ದೂರುದಾರರ ಬಳಿ ಕಡತಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಸಂಗ್ರಹವಾಗುತ್ತಿದ್ದರೂ ಕೂಡ ಸಿಎಂ ಕಚೇರಿ ಗಮನಕ್ಕೆ ಯಾಕೆ ಬರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮೊದಲ ದೂರು ಸಲ್ಲಿಕೆ ಆದಾಗಲೂ ಸಿಎಂ ಕಚೇರಿ ಗಮನಕ್ಕೆ ಬಂದಿಲ್ಲ. ಮುಡಾ ತಾಂತ್ರಿಕ ಸಮಿತಿ ವರದಿಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ತಪ್ಪು ಮಾಡಿದ ಅಧಿಕಾರಿಗಳನ್ನು ಅಯಕಟ್ಟಿನ ಜಾಗದಲ್ಲೇ ಮುಂದುವರಿಸಲಾಯಿತು. ಮೈಸೂರಿನ ಸಿಎಂ ಆಪ್ತ ನಾಯಕರು ಅನಗತ್ಯವಾಗಿ ದೂರುದಾರರನ್ನು ಎದುರು ಹಾಕಿಕೊಂಡರು. ಕೋರ್ಟ್ ಮೆಟ್ಟಿಲು ಹತ್ತಿದಾಗಲೂ ವಾದ ಮಾಡಿದ ರೀತಿ ಸಮರ್ಪಕವಾಗಿ ಇರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಮುಖ್ಯಮಂತ್ರಿಗಳ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್ ವಕೀಲ ಅಘಿಷೇಕ್ ಮನು ಸಿಂಘ್ವಿ ವಾದದ ಬಗ್ಗೆ ಕೆಲ ಸಚಿವರು ಸಂತೃಪ್ತಿ ಹೊಂದಿಲ್ಲ. ಸಿಂಘ್ವಿ ವಾದ ಇನ್ನಷ್ಟು ಸಮರ್ಥವಾಗಿ ಇರಬೇಕಿತ್ತು. ಪ್ರಕರಣದ ಗಂಭೀರತೆ ಅರ್ಥ ಮಾಡಿಕೊಳ್ಳುವಲ್ಲಿ ಸಿಎಂ ವಿಫಲರಾದರು, ಈ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಮೊದಲ ಹಂತದಲ್ಲಿ ಮೇಲುಗೈ ಸಾಧಿಸಲು ಕಾರಣವಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ. ಪ್ರಕರಣ ಬಹಳ ಮುಂದಕ್ಕೆ ಹೋಗಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ಮೊದಲ ದೂರು ರಾಜ್ಯಪಾಲರಿಗೆ ಸಲ್ಲಿಕೆ ಆದಾಗಲೂ ಸಿಎಂ ಕಚೇರಿ ಗಮನಕ್ಕೆ ಬಂದಿಲ್ಲ. ಮೈಸೂರಿನ ಸಿಎಂ ಆಪ್ತ ನಾಯಕರು ಅನಗತ್ಯವಾಗಿ ದೂರುದಾರರನ್ನು ಎದುರು ಹಾಕಿಕೊಂಡರು. ಕೋರ್ಟ್ ಮೆಟ್ಟಿಲು ಹತ್ತಿದಾಗಲೂ ವಾದ ಮಾಡಿದ ರೀತಿ ಸಮರ್ಪಕವಾಗಿ ಇರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎಂದು ಅಸಮಧಾನ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

                       in 

Leave a Reply

Your email address will not be published. Required fields are marked *