ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ರಾಜ್ಯ ರಾಜಕಾರಣದಲ್ಲಿ ಭಾರಿ ವಿವಾದವನ್ನು ಸೃಷ್ಟಿಸಿದ್ದು, ಈ ಹಿಂದೆ ಇಡಿ ದಾಳಿಗೆ ಒಳಗಾಗಿದ್ದ ಮೈಸೂರು ಮೂಲದ ಬಿಲ್ದಡ್ ಜಯರಾಮ್ ಕೋಕನಟ್ ಕೋಡ್ವರ್ಡ್ ಬಳಸಿ ಅಕ್ರಮ ವ್ಯವಹಾರ ನಡೆಸುತ್ತಿದ್ದನು ಎನ್ನುವ ವಿಚಾರ ಇಡಿ ತನಖೆಯಲ್ಲಿ ಬಹಿರಂಗಗೊAಡಿದೆ.
ಬಿಲ್ಡರ್ ಜಯರಾಮ್ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬೇನಾಮಿಯಾಗಿದ್ದ, ವಕ್ರತುಂಡ ಗೃಹ ನಿರ್ಮಾಣ ಸಹಕಾರ ಸಂಘದಿAದ ಸಾಕಷ್ಟು ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಅಲ್ಲದೇ, ಇಲ್ಲಿ ಸಾಕಷ್ಟು ಕಪ್ಪು ಹಣದ ವ್ಯವಹಾರ ಕೂಡ ನಡೆದಿದ್ದು, ಇದಕ್ಕೆ ಜಯರಾಮ್ ಕೋಕನಟ್ ಎಂದು ಕೋಡ್ವರ್ಡ್ ಬಳಸುತ್ತಿದ್ದ, 1 ಕೋಕನಟ್ ಎಂದರೆ 1 ಲಕ್ಷ ರೂ. 50 ಕೋಕನಟ್ ಎಂದರೆ 50 ಲಕ್ಷ ರೂ. ಮತ್ತು 100 ಕೋಕನಟ್ ಎಂದರೆ 1 ಕೋಟಿ ಎಂದು ಕೋಡ್ವರ್ಡ್ ಬಳಸುತ್ತಿದ್ದನು ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ.
300 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇಡಿ ಅಧಿಕಾರಿಗಳು 631 ನಿವೇಶನಗಳ ವಿವರ ಕೇಳಿ ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ 631 ನಿವೇಶನಗಳ ಅಕ್ರಮದಲ್ಲಿ ಬಹುತೇಕರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೇ ಭಾಗಿಯಾಗಿದ್ದಾರೆ. ಇದರಲ್ಲಿ, ಮುಡಾ ಮಾಜಿ ಆಯುಕ್ತರಿಗೆ ಸೇರಿದ 198 ಬೇನಾಮಿ ನಿವೇಶನಗಳಿವೆ ಎಂದು ತಿಳಿದುಬಂದಿದೆ. ಇಡಿ ತನಿಖೆ ಇದೀಗ ಮತ್ತೆ ಚುರುಕಾಗಿದ್ದು, ಮುಡಾ ಭ್ರಷ್ಟರಿಗೆ ಮತ್ತೆ ನಡುಕ ಶುರುವಾಗಿದೆ.