ಕಾರ್ಕಳ: ಯಕ್ಷಗಾನಾಸಕ್ತ ವಿದ್ಯಾರ್ಥಿಗಳಿಗೆ ನಾಟ್ಯ ತರಬೇತಿ ನೀಡಿ ಕಲಾವಿದರನ್ನು ಸೃಷ್ಟಿಸುವ ಕೈಂಕರ್ಯದಲ್ಲಿ ತೊಡಗಿರುವ ಕಾರ್ಕಳದ ಯಕ್ಷಕಲಾರಂಗ ಸಂಸ್ಥೆಯು ಮಂಗಳೂರಿನ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಹಯೋಗದೊಂದಿಗೆ ಮುಡಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಶುಕ್ರವಾರ ಯಕ್ಷಗಾನ ತರಗತಿ ಉದ್ಘಾಟಿಸಲಾಯಿತು.
ಯಕ್ಷ ಕಲಾರಂಗದ ಅದ್ಯಕ್ಷ ಉದ್ಯಮಿ ವಿಜಯ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಡಾರು ಗ್ರಾಮ ಪಂಚಾಯತ್ ಸದಸ್ಯ ಶಿವಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕಲಾವಿದ ಮಹಾವೀರ ಪಾಂಡಿಯವರು ಯಕ್ಷಗಾನ ಮತ್ತು ಯಕ್ಷಶಿಕ್ಷಣದ ವಿಚಾರವಾಗಿ ಪ್ರಸ್ತಾವನೆಗೈದರು.ಕೋಶಾದ್ಯಕ್ಷ ಪ್ರೊ.ಶ್ರೀವರ್ಮ ಅಜ್ರಿ ಉಪಸ್ಥಿತರಿದ್ದು ಮಕ್ಕಳ ಆಟ ಪಾಠ ಚಟುವಟಿಕೆಗಳ ಬಗ್ಗೆ ಪೋಷಕರು ಸಹಕರಿಸುತ್ತಿರಬೇಕು ಎಂದರು.
ಯಕ್ಷಗಾನ ನಾಟ್ಯ ಗುರು ಆನಂದ ಗುಡಿಗಾರ್ , ಶಾಲಾ ಎಸ್.ಡಿ.ಎಂ.ಸಿ.ಸದಸ್ಯ ದಿವಾಕರ್ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ದೇವದಾಸ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು ಸಹ ಶಿಕ್ಷಕಿ ವೀಣಾ ಸರಸ್ವತಿ ವಂದಿಸಿದರು
