ಕಾರ್ಕಳ: ಕಾರ್ಕಳ ತಾಲೂಕಿನ ಮುಡಾರು ಗ್ರಾಮದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮುಡಾರು ಗ್ರಾಮದ ಗರಡಿಗುಡ್ಡೆ ನಿವಾಸಿ ಸುಂದರಿ ಮಡಿವಾಳ್ತಿ(85) ಎಂಬವರು ತನ್ನ ಮಗಳ ಮನೆಯಲ್ಲಿ ವಾಸವಿದ್ದರು. ಜು.27 ರಂದು ಸಂಜೆ 6.45 ಕ್ಕೆ ಮನೆಯಿಂದ ಹೊರಬಂದ ಸುಂದರಿ ಅವರು ಆಯತಪ್ಪಿ ಮನೆಯಂಗಳ ಪಕ್ಕದ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮುಡಾರು ಗ್ರಾಮದ ಗುರ್ಗಾಲ್ ಗುಡ್ಡೆ ನಿವಾಸಿ ಅಜಿತ್ ಕುಮಾರ್ ಉಪಾಧ್ಯ(59) ಎಂಬವರು ಭಾನುವಾರ ಶಿವಮೊಗ್ಗದಿಂದ ಕೆಲಸ ಮುಗಿಸಿ ರಾತ್ರಿ ಮುಡಾರಿನ ಮನೆಗೆ ಬಂದು ಊಟ ಮಾಡಿ ಮಲಗಿದ್ದಾಗ ರಾತ್ರಿ 1 ಗಂಟೆಗೆ ಏಕಾಎಕಿ ಅಸ್ವಸ್ಥಗೊಂಡು ಆಸ್ಪತ್ರೆ ಸಾಗಿಸುವ ಮುನ್ನವೇ ಮೃತಪಟ್ಟಿದ್ದರು.
ಅಜಿತ್ ಕುಮಾರ್ ಶಿವಮೊಗ್ಗದ ಹೊಳಲ್ಕೆರೆ ಎಂಬಲ್ಲಿ ಖಾಸಗಿ ಎಲೆಕ್ಟ್ರಿಕಲ್ ಕಂಪನಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡಿಕೊಂಡಿದ್ದರು.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ