ಹೆಬ್ರಿ: ಮುದ್ರಾಡಿಯ ಬಲ್ಲಾಡಿ ಪ್ರದೇಶದಲ್ಲಿ ಭಾನುವಾರ ಮೇಘ ಸ್ಪೋಟದಿಂದ ಸುರಿದ ಭಾರೀ ಮಳೆಯಿಂದ ಹಲವು ಮನೆಗಳು ಹಾಗೂ ನೂರಾರು ಎಕರೆ ಭತ್ತ,ರಬ್ಬರ್,ಅಡಿಕೆ ಕೃಷಿ ಭೂಮಿ ಹಾನಿಗೊಳಗಾಗಿದ್ದು, ಈ ಪ್ರದೇಶಕ್ಕೆ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದರು.
ಪ್ರವಾಹಪೀಡಿತರ ಮನೆಗಳಿಗೆ ಭೇಟಿ ನೀಡಿದ ಉದಯ ಶೆಟ್ಟಿ, ಕೃಷಿನಾಶವಾಗಿರುವ ರೈತರಿಗೆ ಸರಕಾರದಿಂದ ನೀಡುವ ಪರಿಹಾರ ಮೊತ್ತವನ್ನು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈ ಗೊಳ್ಳುವುದಾಗಿ ತಿಳಿಸಿದರು.
ಪ್ರವಾಹದ ಪಾಲಾಗಿ ಜೀವ ಕಳೆದುಕೊಂಡ ಚಂದ್ರು ಗೌಡ್ತಿ ಮನೆಗೆ ಭೇಟಿ ನೀಡಿದ ಅವರು ಮನೆಯವರಿಗೆ ಸಾಂತ್ವನ ಹೇಳಿದರು.