ಕಾರ್ಕಳ: ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ತಾಲೂಕಿನ ಮುಂಡ್ಕೂರಿನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕಾರ್ಕಳ ವೃತ್ತ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ಅವರು ಅಕ್ರಮವಾಗಿ ಮರಳು ಸಾಗಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ವೃತ್ತದ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕತವ್ಯದಲ್ಲಿದ್ದ ವೇಳೆ ಮುಂಡ್ಕೂರು ಗ್ರಾಮದ ಮುಂಡೇಲ್ ಪಾಂಡು ಹೋಟೇಲ್ ಬಳಿ ರಾತ್ರಿ 8. 30 ರ ವೇಳೆಗೆ ಸಕಂಲಕರಿಯ ಕಡೆಯಿಂದ ಬೆಳ್ಮಣ್ ಕಡೆಗೆ ಇಲಾಖೆಯಿಂದ ಯಾವುದೇ ಪರವಾನಿಗೆ ಇಲ್ಲದೆ ಮರಳು ಸಾಗಿಸುತ್ತಿರುವುದು ತಿಳಿದು ಬಂದಿದೆ.
ಆರೋಪಿಯ ಮಾಲಕ ಗುರುಪುರದ ರಾಜೇಶ್ ಮುಂದಾಳುತ್ವದಲ್ಲಿ ಮಂಗಳೂರು ತಾಲೂಕಿನ ಕಿನ್ನಿಗೋಳಿ ಎಂಬಲ್ಲಿಂದ 8,000/- ರೂಪಾಯಿ ಮೌಲ್ಯದ 3 ಯುನಿಟ್ ಮರಳನ್ನು ಕಳ್ಳತನ ಮಾಡಿ ಮುಂಡ್ಕೂರು ಕಡೆಯಿಂದ ಬೆಳ್ಮಣ್ ಕಡೆಗೆ ಸಾಗಾಟ ಮಾಡುತ್ತಿರುವುದಾಗಿ ಹೇಳಿದ್ದು, ಪೊಲೀಸರು ಮರಳನ್ನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.