ಕಾರ್ಕಳ: ಮುಂಡ್ಕೂರು ಗ್ರಾಮದ ಕಜೆ ಎಂಬಲ್ಲಿ ಟ್ರಾಕ್ಟರ್ ಪಲ್ಟಿಯಾಗಿ ಕೇರಳ ಮೂಲದ ಕಾರ್ಮಿಕ ದಾರುಣವಾಗಿ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರದ ತೆನ್ನರಸನ್ ಎಂಬವರು ಮೃತಪಟ್ಟ ಟ್ರಾಕ್ಟರ್ ಚಾಲಕ. ಮುಂಡ್ಕೂರಿನ ಕಜೆ ನಿವಾಸಿ ಲಕ್ಷ್ಮೀ ನಾರಾಯಣ ಎಂಬವರ ರಬ್ಬರ್ ಫ್ಲ್ಯಾಂಟೇಷನ್ ನಲ್ಲಿ ರಬ್ಬರ್ ಮರಗಳನ್ನು ಜಾನ್ ಡೇನಿಯಲ್ ಎಂಬವರು ಖರೀದಿಸಿದ್ದು, ಅವುಗಳನ್ನು ಕತ್ತರಿಸಿ ಟ್ರಾಕ್ಟರಿನಲ್ಲಿ ತುಂಬಿಸಿ ಲಾರಿಗೆ ಲೋಡ್ ಮಾಡುವ ಕೆಲಸ ನಡೆಯುತ್ತಿದ್ದ ವೇಳೆ ಟ್ರಾಕ್ಟರಿನ ಡೀಸೆಲ್ ಖಾಲಿಯಾದ ಕಾರಣದಿಂದ ಚಾಲಕ ತೆನ್ನರಸನ್ ಡೀಸೆಲ್ ತುಂಬಿಸಲು ಮುಂಡ್ಕೂರಿಗೆ ಹೋಗಿ ಮರಳಿ ರಬ್ಬರ್ ತೋಟಕ್ಕೆ ಬರುತ್ತಿದ್ದಾಗ ಟ್ರಾಕ್ಟರ್ ಕಜೆ ಶಾಲೆಯ ಬಳಿ ಮಗುಚಿ ಬಿದ್ದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ತೆನ್ನರಸನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
