
ಹೆಬ್ರಿ,ಡಿ.29:ಮುನಿಯಾಲು ಬಂಟರ ಸಂಘದ ವತಿಯಿಂದ ವಿದ್ಯಾರ್ಥಿ ವೇತನ, ಆಶಕ್ತರಿಗೆ ಸಹಾಯಧನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವು ಡಿ.29 ರಂದು ಮುನಿಯಾಲಿನ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ, ಭಾರತ ಸೈನ್ಯ ದಲ್ಲಿ ಹದಿನೇಳು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದ ಮುನಿಯಾಲಿನ ವೀರ ಯೋಧ ಪ್ರವೀಣ್ ಕುಮಾರ್ ಶೆಟ್ಟಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂಚವಟಿ ಶಂಕರ್ ಶೆಟ್ಟಿ ಅಲ್ಲದೇ ಜೂನಿಯರ್ ಕಬಡ್ಡಿ ವಿಭಾಗದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿಪುಲ್ ಶೆಟ್ಟಿ ಮುಟ್ಲುಪಾಡಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಬಂಟರ ಸಂಘ ಮುನಿಯಾಲು ಇದರ ಗೌರವಧ್ಯಕ್ಷರಾದ ದಿವಾಕರ್ ವೈ ಶೆಟ್ಟಿ, ಸಂಘದ ಅಧ್ಯಕ್ಷರಾದ ಮುಟ್ಲುಪಾಡಿ ಸತೀಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ರಾಜ್ ಶೆಟ್ಟಿ ಮತ್ತು ನವೀನ್ ರಾಜ್ ಶೆಟ್ಟಿ, ಉಪಾಧ್ಯಕ್ಷರಾದ ಸುರೇಂದ್ರ ಶೆಟ್ಟಿ, ಕಾರ್ಯಕ್ರಮದಲ್ಲಿ ಸೀತಾರಾಮ್ ಕಡಂಬ, ಅಶೋಕ್ ಶೆಟ್ಟಿ, ಭುಜಂಗ ಶೆಟ್ಟಿ, ಸುಜಯ್ ಶೆಟ್ಟಿ, ಸುಂದರ್ ಶೆಟ್ಟಿ, ಸುರೇಶ್ ರೈ, ಸಮೃದ್ಧಿ ಪ್ರಕಾಶ್ ಶೆಟ್ಟಿ ಹಾಗೂ ಪ್ರಸನ್ನ ಶೆಟ್ಟಿ ಮತ್ತು ದಯಾನಂದ ಶೆಟ್ಟಿ ಮುಟ್ಲುಪಾಡಿ ಇವರು ಉಪಸ್ಥಿತರಿದ್ದರು.
ಅಲ್ಲದೇ ವಿದ್ಯಾರ್ಥಿ ಗಳು, ಪೋಷಕರು ಹಾಗೂ ಬಂಟ ಸಮಾಜ ಬಂದುಗಳು ಉಪಸ್ಥಿತರಿದ್ದರು.


.
.
