ಹೆಬ್ರಿ: ಬೈಕ್ ಹಾಗೂ ಸ್ಕೂಟರ್ ನಡುವೆ ಡಿಕ್ಕಿಯಾಗಿ ಪಿಗ್ಮಿ ಸಂಗ್ರಾಹ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಹೆಬ್ರಿ ತಾಲೂಕಿನ ಮುನಿಯಾಲು ಸಮೀಪದ ಮಾತಿಬೆಟ್ಟು ಪೆಟ್ರೋಲ್ ಬಂಕ್ ಬಳಿ ಬುಧವಾರ ಸಂಜೆ ಈ ಅಪಘಾತ ಸಂಭವಿಸಿದ್ದು,ಬೈಕ್ ಸವಾರ ಪಿಗ್ಮಿ ಸಂಗ್ರಾಹಕ ಅಂಡಾರು ಗ್ರಾಮದ ಶಿವಪ್ರಸಾದ್ ಹಾಗೂ ಸ್ಕೂಟರ್ ಸವಾರ ಮುಟ್ಲುಪಾಡಿ ನಿವಾಸಿ ಸುಬ್ಬಣ್ಣ ಎಂಬವರು ಗಾಯಗೊಂಡಿದ್ದಾರೆ.
ಸ್ಕೂಟರ್ ಸವಾರ ಸುಬ್ಬಣ್ಣ ಪೆಟ್ರೋಲ್ ಬಂಕಿನಿAದ ಸ್ಕೂಟರಿಗೆ ಪೆಟ್ರೋಲ್ ಹಾಕಿಸಿಕೊಂಡು ವರಂಗದ ಕಡೆಗೆ ತೆರಳಲು ಏಕಾಎಕಿ ಮುಖ್ಯರಸ್ತೆಗೆ ಅಡ್ಡಬಂದ ಪರಿಣಾಮ ಹೆಬ್ರಿ ಕಡೆಯಿಂದ ಮುನಿಯಾಲು ಕಡೆಗೆ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ಶಿವಪ್ರಸಾದ್ ಅವರ ಬೈಕಿಗೆ ಸ್ಕೂಟರ್ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಬೈಕ್ ಸವಾರ ಶಿವಪ್ರಸಾದ್ ಅವರ ಎರಡು ಕೈಗಳಿಗೂ ಗಾಯಗಳಾಗಿದ್ದು, ಸ್ಕೂಟರ್ ಸವಾರನಿಗೂ ಗಾಯಗಳಾಗಿವೆ.ಅಪಘಾತಕ್ಕೆ ಸ್ಕೂಟರ್ ಸವಾರನ ನಿರ್ಲಕ್ಷö್ಯವೇ ಕಾರಣ ಎನ್ನಲಾಗಿದೆ.