Share this news

ಹೆಬ್ರಿ: ವೇಗವಾಗಿ ಸಾಗುತ್ತಿದ್ದ ಕಾರೊಂದು ಎದುರಿನಿಂದ ಸಾಗುತ್ತಿದ್ದ ಕಾರನ್ನು ಓವರ್’ಟೇಕ್ ಮಾಡುವ ಭರದಲ್ಲಿ ಡಿವೈಡರ್’ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಹೆಬ್ರಿ ತಾಲೂಕಿನ ಮುನಿಯಾಲಿನಲ್ಲಿ ಶನಿವಾರ ಮಧ್ಯಾಹ್ನ ಸಂಭವಿಸಿದೆ.

ಮಂಗಳೂರಿನಿಂದ ವಿದ್ಯಾರ್ಥಿಗಳ ತಂಡವು ಎರಡು ಕಾರುಗಳಲ್ಲಿ ಹೆಬ್ರಿ ಕಡೆಗೆ ಹೋಗುತ್ತಿದ್ದಾಗ ಮುನಿಯಾಲು ಪೇಟೆಯಲ್ಲಿ ಹಿಂಬದಿಯ ಕಾರು ಚಾಲಕ ಏಕಾಎಕಿ ಕಾರನ್ನು ಓವರ್’ಟೇಕ್ ಮಾಡಲು ಮುಂದಾಗಿ ನಿಯಂತ್ರಣ ತಪ್ಪಿ ಡಿವೈಡರ್ ಗೆ ಗುದ್ದಿದ್ದಾನೆ. ಅಪಘಾತದಿಂದ ಕಾರು ಡಿವೈಡರ್ ಏರಿ ಮೇಲ್ಮುಖವಾಗಿ ಪಲ್ಟಿಯಾಗಿದೆ.
ತಕ್ಷಣವೇ ವಿದ್ಯಾರ್ಥಿಗಳು ಯಾವುದೇ ಗಾಯಗಳಿಲ್ಲದೇ ಕಾರಿನಿಂದ ಹೊರಬಂದಿದ್ದಾರೆ.
ಬಳಿಕ ಸ್ಥಳೀಯರು ಕಾರನ್ನು ಮೇಲೆತ್ತಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು

ಚಿತ್ರ,ವರದಿ: ಪ್ರಮೋದ್’ಚಂದ್ರ ಪೈ ಮುನಿಯಾಲು

                        

                          

                        

                          

 

`

Leave a Reply

Your email address will not be published. Required fields are marked *